ಒಂದುಕಾಲದ ಐಪಿಎಲ್‌ ಪರ್ಪಲ್‌ ಕ್ಯಾಪ್‌ ವಿನ್ನರ್‌ ಈಗ ಗುಜರಾತ್‌ ಪ್ರಾಂಚೈಸಿ ನೆಟ್‌ ಬೌಲರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕ್ರಿಕೆಟ್‌ ಒಂದು ಬಗೆಯ ಅನಿಶ್ಚಿತತೆಯ ಆಟ. ಒಂದು ಕಾಲದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದವರು ಏಕಾಏಕಿ ಫಾರ್ಮ್‌ ಕಳೆದುಕೊಂಡು ಕೆಳಗೆ ಬಿದ್ದ ಅನೇಕ ಉದಾಹರಣೆಗಳಿವೆ. ಅದರಲ್ಲಿಯೂ ಬೌಲರ್‌ ಗಳು ತಮ್ಮ ಫಾರ್ಮ್‌ ಅನ್ನು ಧೀರ್ಘಕಾಲದವರೆಗೆ ಕಾಯ್ದುಕೊಳ್ಳುವುದು ಬಹಳವೇ ಕಠಿಣ. ಒಂದು ಕಾಲದಲ್ಲಿ ಸಿಎಸ್‌ ಕೆ ತಂಡದ ಬೌಲಿಂಗ್‌ ಆಧಾರಸ್ತಂಭವಾಗಿದ್ದ, ವಿಶ್ವಕಪ್‌ ತಂಡದಲ್ಲೂ ಆಡಿದ್ದ ಮೋಹಿತ್‌ ಶರ್ಮಾ ಅವರ ಕ್ರಿಕೆಟ್‌ ವೃತ್ತಿಜೀವನ ಈಗ ಬೇರೆಯದ್ದೇ ತಿರುವು ಪಡೆದಿದೆ.
ಮೋಹಿತ್‌ ಶರ್ಮಾ ಅವರು ಇದೀಗ ಐಪಿಎಲ್‌ 2022ರ ನೂತನ ತಂಡ ಗುಜರಾತ್‌ ಟೈಟಾನ್ಸ್‌ ಗೆ ನೆಟ್‌ ಬೌಲರ್‌ ಆಗಿ ಆಯ್ಕೆಯಾಗಿದ್ದಾರೆ.
ಹರಿಯಾಣ ಮೂಲದ ಬೌಲರ್ ಮೋಹಿತ್ ಶರ್ಮಾ ಅವರು ಒಂದು ಕಾಲದಲ್ಲಿ ಸಿಎಸ್‌ ಕೆ ತಂಡದ ಮುಂಚೂಣಿ ವೇಗಿಯಾಗಿದ್ದರು. ಮಂದಗತಿಯ ಎಸೆತಗಳಿಂದ ಎದುರಾಳಿ ಬ್ಯಾಟ್ಸ್‌ ಮನ್ ಗಳನ್ನು ಕಟ್ಟಿಹಾಕುತ್ತಿದ್ದ ಮೋಹಿತ್‌ 86 ಐಪಿಎಲ್‌ ಪಂದ್ಯಗಳಲ್ಲಿ 92 ವಿಕೆಟ್‌ ಕಬಳಿಸಿದ್ದಾರೆ. 2014 ರ ಸೀಜನ್‌ ನಲ್ಲಿ 23 ವಿಕೆಟ್‌ ಕಬಳಿಸುವ ಮೂಲಕ ಪರ್ಪಲ್‌ ಕ್ಯಾಪ್‌ ಅನ್ನು ಮುಡಿಗೇರಿಸಿಕೊಂಡಿದ್ದರು. 2014 ರ ಟಿ ಟ್ವಿಂಟಿ ಹಾಗೂ 2015ರ ಏಕದಿನ ವಿಶ್ವಕಪ್‌ ನಲ್ಲಿ ಮೋಹಿತ್‌ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
ಈ ಬಾರಿಯ ಹರಾಜಿನಲ್ಲಿ ಬಿಕರಿಯಾಗದ ಮೋಹಿತ್‌ ಹಾಗೂ ಬರೀಂದರ್‌ ಸ್ರಾನ್‌ ಅವರನ್ನು ಗುಜರಾತ್‌ ಪ್ರಾಂಚೈಸಿಯು ನೆಟ್‌ ಬೌಲರ್‌ ಗಳಾಗಿ ಆಯ್ಕೆ ಮಾಡಿಕೊಂಡಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!