ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಟಿ ಸೇವೆಗಳ ಕಂಪನಿ ಟೆಕ್ ಮಹೀಂದ್ರಾ ಶನಿವಾರದಂದು, ಇನ್ಫೋಸಿಸ್ ಮಾಜಿ ಅಧ್ಯಕ್ಷ ಮೋಹಿತ್ ಜೋಶಿ ಅವರನ್ನು ತನ್ನ ವ್ಯವಸ್ಥಾಪಕ ನಿರ್ದೇಶಕ (MD) ಹಾಗು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯನ್ನಾಗಿ ನೇಮಿಸಿಕೊಂಡಿದೆ. ಕಂಪನಿಗಳ ಕಾಯಿದೆ, 2013 ರ ಅಡಿಯಲ್ಲಿ 5 ವರ್ಷಗಳ ಅವಧಿಗೆ ಜೋಶಿಯವರನ್ನು ನೇಮಿಸಿಕೊಳ್ಳಲಾಗಿದ್ದು ಅವರ ಅಧಿಕಾರಾವಧಿಯು 19 ಡಿಸೆಂಬರ್ 2028 ರವರೆಗೆಇರಲಿದೆ.
ಮೋಹಿತ್ ಜೋಶಿ ಈ ಹಿಂದೆ ಭಾರತದ ದಿಗ್ಗಜ ಕಂಪನಿಗಳ ಸಾಲಿನಲ್ಲಿರುವ ಇನ್ಫೋಸಿಸ್ ಕಂಪನಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಎಂಟರ್‌ಪ್ರೈಸ್ ತಂತ್ರಜ್ಞಾನ ಸಾಫ್ಟ್‌ವೇರ್ ಮತ್ತು ಸಲಹಾ ಕ್ಷೇತ್ರದಲ್ಲಿ ಎರಡು ದಶಕಗಳ ಅನುಭವವನ್ನು ಹೊಂದಿದ್ದಾರೆ. ಇನ್ಫೋಸಿಸ್‌ನಲ್ಲಿ, ಮೋಹಿತ್ ಜಾಗತಿಕ ಹಣಕಾಸು ಸೇವೆಗಳು ಮತ್ತು ಹೆಲ್ತ್‌ಕೇರ್ ಮತ್ತು ಸಾಫ್ಟ್‌ವೇರ್ ವ್ಯವಹಾರಗಳ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಅನುಭವವೂ ಇವರಿಗಿದೆ. ಪ್ರಸ್ತುತ ಇನ್ಫೋಸಿಸ್ ಅಧ್ಯಕ್ಷ ಸ್ಥಾನಕ್ಕೆ ಮೋಹಿತ್ ಜೋಶಿ ರಾಜಿನಾಮೆ ನೀಡಿದ್ದು ಇನ್ಮುಂದೆ ಟೆಕ್ ಮಹೀಂದ್ರಾ ಕಂಪನಿಗೆ ಸೇರಲಿದ್ದಾರೆ.