Tuesday, August 16, 2022

Latest Posts

ಮಹಾರಾಷ್ಟ್ರ ಮಾಜಿ ಪೊಲೀಸ್​ ಕ​ಮಿಷನರ್​ ವಿರುದ್ಧ ಭ್ರಷ್ಟಾಚಾರ ಆರೋಪ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಮುಂಬೈ ಮಾಜಿ ಪೊಲೀಸ್​ ಕ​ಮಿಷನರ್​ ಪರಮ್​ ಬೀರ್ ಸಿಂಗ್, ಮಹಾರಾಷ್ಟ್ರದ ಅಂದಿನ ಗೃಹ ಮಂತ್ರಿ ಅನಿಲ್​ ದೇಶ್​ಮುಖ್ ವಿರುದ್ಧ ಆರೋಪಿಸಿದ್ದ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ದೇಶಮುಖ್ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದ್ದು, ಇದೀಗ ಇದರ ನಡುವೆ ಮುಂಬೈನ ಇಬ್ಬರು ಬಿಸಿನೆಸ್​ಮೆನ್​ ಪರಮ್​ ಬೀರ್​ ಸಿಂಗ್ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.
ಕ್ರಿಕೆಟ್​ ಬುಕಿ ಆಗಿರುವ ಆರೋಪ ಎದುರಿಸುತ್ತಿರುವ ವ್ಯಾಪಾರಿ ಸೋನು ಜಾಲನ್​, ಸಿಂಗ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ತಮ್ಮಿಂದ 3.45 ಕೋಟಿ ರೂ. ಸುಲಿಗೆ ಮಾಡಿದ್ದರು ಎಂದು ಮಹಾರಾಷ್ಟ್ರ ಡಿಜಿಪಿಗೆ ಪತ್ರ ಬರೆದಿದ್ದಾರೆ. ಮತ್ತೊಬ್ಬ ವ್ಯಾಪಾರಿ ಮಯೂರೇಶ್​ ರೌತ್ ಕೂಡ ಈ ವಾರದ ಆರಂಭದಲ್ಲಿ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.
ಥಾಣೆ ಪೊಲೀಸ್​ ಇನ್ಸ್​ಪೆಕ್ಟರ್ ರಾಜ್​ಕುಮಾರ್​ ಕೊತಮಿರೆ ಮತ್ತು ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮ 2017 ರಲ್ಲಿ ಪರಮ್ ಬೀರ್ ಸಿಂಗ್​ ಅವರ ಸೂಚನೆ ಮೇರೆಗೆ ತಮಗೆ ಕಿರುಕುಳ ನೀಡಿದ್ದರು ಮತ್ತು ತಮ್ಮ ಎರಡು ಐಷಾರಾಮಿ ಕಾರುಗಳನ್ನು ಕಸಿದಿದ್ದರು ಎಂದು ರೌತ್ ಆರೋಪಿಸಿದ್ದಾರೆ.
ಜಾಲನ್ ಮತ್ತು ರೌತ್ ಇಬ್ಬರೂ ದಕ್ಷಿಣ ಮುಂಬೈನಲ್ಲಿರುವ ನ್ಯಾಷನಲ್ ಇನ್​ವೆಸ್ಟಿಗೇಷನ್ ಏಜೆನ್ಸಿ(ಎನ್‌ಐಎ) ಕಚೇರಿಗೆ ನಿನ್ನೆ ಭೇಟಿ ನೀಡಿದ್ದು, ಎನ್​ಐಎ ಅಧಿಕಾರಿಗಳು ಈ ಇಬ್ಬರು ವ್ಯಾಪಾರಿಗಳ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss