Sunday, July 3, 2022

Latest Posts

ಕಲಬುರಗಿ ಪತ್ರಿಕಾ ಭವನಕ್ಕೆ ಲಂಡನ್ ಮಾಜಿ ಮೇಯರ್ ಭೇಟಿ

ಹೊಸದಿಗಂತ ವರದಿ,ಕಲಬುರಗಿ:

ಜನವರಿ 3 ಹಾಗೂ 4 ರಂದು ಕಲಬುರಗಿಯಲ್ಲಿ ನಡೆಯಲಿರುವ ಕನಾ೯ಟಕ ಕಾರ್ಯನಿರತ ಪತ್ರಕರ್ತರ 36ನೇ ರಾಜ್ಯ ಸಮ್ಮೇಳನದಲ್ಲಿ ಜ. 3ರಂದು ಸಂಜೆ ಬ್ರ್ಯಾಂಡ್ ಕಲಬುರಗಿ ಯಲ್ಲಿ ಜಿಲ್ಲೆಗೆ ಹಾಗೂ ಈ ಭಾಗಕ್ಕೆ ಹೆಸರು ತಂದಿರುವ ಗಣ್ಯರು, ಮಹನೀಯರ ನ್ನು ಸನ್ಮಾನಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ, ಲಂಡನ್ ಮಾಜಿ ಮೇಯರ ಡಾ. ನೀರಜ್ ಪಾಟೀಲ್ ಸೇರಿದಂತೆ ಇತರ ಗಣ್ಯರನ್ನು ಸನ್ಮಾನಿಸಲಾಗುತ್ತಿದೆ.
ಸನ್ಮಾನ ಹಿನ್ನೆಲೆಯಲ್ಲಿ ಡಾ. ನೀರಜ್ ಪಾಟೀಲ್ ಅವರಿಗೆ ಕರೆ ಮಾಡಿದಾಗ ನಾನು ಇಲ್ಲೇ ಕಲಬುರಗಿಯಲ್ಲಿದ್ದೇನೆ. ಪತ್ರಿಕಾ ಭವನಕ್ಕೆ ಬರುತ್ತೇನೆ ಎಂದು ಹೇಳಿ ಪತ್ರಿಕಾ ಭವನಕ್ಕಿಂದು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪಾಟೀಲ್, 25 ವರ್ಷಗಳ ನಂತರ ಕಲಬುರಗಿ ಯಲ್ಲಿ ಸಮ್ಮೇಳನದ ನಡೆಯುತ್ತಿರುವುದು ಖುಷಿ ತಂದಿದೆ. ಸಮ್ಮೇಳನದಲ್ಲಿ ತಮ್ಮನ್ನು ಸನ್ಮಾನಿಸುತ್ತಿರುವುದನ್ನು ಅಭಿಮಾನದಿಂದ ಅತೀ ಸಂತಸದಿಂದ ಸ್ವೀಕರಿಸುವುದಾಗಿ ಹೇಳಿದರು. ಜ 3 ಹಾಗೂ 4 ರಂದು ಕಲಬುರಗಿ ಯಲ್ಲೇ ಇರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಪ್ರಧಾನ ಕಾರ್ಯದರ್ಶಿ ದೇವಿಂದ್ರಪ್ಪ ಆವಂಟಿ, ರಾಜ್ಯ ಸಮಿತಿ ಸದಸ್ಯರಾದ ಹಣಮಂತರಾವ ಭೈರಾಮಡಗಿ, ದೇವಿಂದ್ರಪ್ಪ ಕಪನೂರ, ಸಮಿತಿ ಸದಸ್ಯರಾದ ರಾಜಶೇಖರಯ್ಯ ಸ್ವಾಮಿ, ಶಿವಕುಮಾರ್ ಪಾಟೀಲ್, ಶರಣಬಸವ ಅನವರ ಸೇರಿದಂತೆ ಮುಂತಾದವರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss