Sunday, April 18, 2021

Latest Posts

ಮಿಸ್ ಶ್ರೀಲಂಕಾ ವಿಜೇತೆಯ ಕಿರೀಟ ಕಿತ್ತು ತೆಗೆದ ಮಾಜಿ ಮಿಸ್ ವರ್ಲ್ಡ್ ವಿಜೇತೆ!

ಹೊಸದಿಗಂತ ಆನ್ ಲೈನ್ ಡೆಸ್ಕ್:

2021ರ ಮಿಸ್ ಶ್ರೀಲಂಕಾ ಬ್ಯೂಟಿ ಸ್ಪರ್ಧೆಯ ವಿಜೇತೆ ಪುಷ್ಪಿಕ ಡಿ ಸಿಲ್ವಾ ಅವರ ಕಿರೀಟವನ್ನು, 2020ರ ಮಿಸ್ ವರ್ಲ್ಡ್ ವಿಜೇತೆ ವೇದಿಕೆಯಲ್ಲೇ ಕಳಚಿದ ಘಟನೆ ನಡೆದಿದೆ.
2019ರಲ್ಲಿ ಮಿಸ್ ಶ್ರೀಲಂಕಾ ಸ್ಪರ್ಧೆಯ ವಿಜೇತೆಯಾಗಿದ್ದ ಕ್ಯಾರೋಲಿನ್ ಜೂರಿ, ಡಿ ಸಿಲ್ವಾ ಅವರು ಪತಿಯಿಂದ ವಿಚ್ಛೇದನ ಪಡೆದಿದ್ದಾರೆ ಎಂದು ಹೇಳಿ, ಈಕೆಯನ್ನು ‘ಮಿಸ್ ಶ್ರೀಲಂಕಾ ಬ್ಯೂಟಿ ಸ್ಪರ್ಧೆ’ಯ ವಿಜೇತೆ ಎಂದು ಘೋಷಿಸಿರುವುದು ತಪ್ಪು ಅಂತ ಹೇಳಿದ್ದಾರೆ.
ಈ ಹಿನ್ನೆಲೆ ಆಕೆ ವೇದಿಕೆಯಲ್ಲೇ ಡಿ ಸಿಲ್ವಾ ತಲೆಮೇಲಿದ್ದ ಕಿರೀಟ ಕಿತ್ತು ತೆಗೆದು, ಅದನ್ನು ರನ್ನರ್ ಅಪ್​ಗೆ ತೊಡಿಸಿದ್ದಾರೆ.ವೇದಿಕೆಯಲ್ಲೇ ನಡೆದ ಘಟನೆ ವಿಡಿಯೋ ವೈರಲ್ ಆಗಿದೆ.
ಪತಿಯಿಂದ ವಿಚ್ಛೇದನ ಪಡೆದ ಮಹಿಳೆಯರು ಈ ಶೋ ನಲ್ಲಿ ಭಾಗವಹಿಸುವಂತಿಲ್ಲ. ಜೊತೆಗೆ ವಿಜೇತರನ್ನಾಗಿ ಅಂತಹವರನ್ನು ಆಯ್ಕೆ ಮಾಡುವಂತಿಲ್ಲ. ಇದು ನಿಯಮ. ಈ ಹಿನ್ನೆಲೆಯಲ್ಲಿ ಆದ ಕಾರಣ ನಾನು ಈ ರೀತಿ ಮಾಡಿದೆ” ಎಂದು ಕ್ಯಾರೋಲಿನ್ ಜೂರಿ ಹೇಳಿದ್ದಾರೆ.
ಇನ್ನು ಈ ಘಟನೆ ಬಗ್ಗೆ ಫೇಸ್​ಬುಕ್ ಪೋಸ್ಟ್​ನಲ್ಲಿ ಬರೆದಿರುವ ಪುಷ್ಪಿಕ ಡಿ ಸಿಲ್ವಾ, ‘ಕಿರೀಟ ಕಿತ್ತು ತೆಗೆದ ಪರಿಣಾಮ ತಮ್ಮ ತಲೆಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ತಾನು ವಿಚ್ಛೇದನ ಪಡೆದಿದ್ದರೆ, ಸ್ಪರ್ಧೆಯಲ್ಲಿ ಈ ಹಂತಕ್ಕೆ ಬರುತ್ತಲೇ ಇರಲಿಲ್ಲ’ಎಂದಿದ್ದಾರೆ.
ಇನ್ನು ಕಾರ್ಯಕ್ರಮದ ಆಯೋಜಕರೂ ಸಹ ಡಿ ಸಿಲ್ವಾ ಅವರ ಬಳಿ ಕ್ಷಮೆ ಕೋರಿದ್ದು, ಆಕೆ ಪತಿಯಿಂದ ದೂರವಾಗಿದ್ದಾರೆಯೇ ಹೊರತು ವಿಚ್ಛೇದನ ಪಡೆದುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಡಿ ಸಿಲ್ವಾ ಅವರೇ 2021ನೇ ಸಾಲಿನ ವಿಜೇತೆ ಎಂಬುದನ್ನು ಖಚಿತಪಡಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss