spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗುಂಡು ಹೊಡೆದುಕೊಂಡು ನಗರಸಭಾ ಮಾಜಿ ಸದಸ್ಯ ಆತ್ಮಹತ್ಯೆ

- Advertisement -Nitte

ಹೊಸ ದಿಗಂತ ವರದಿ,ಮಡಿಕೇರಿ:

ಮಡಿಕೇರಿ ನಗರಸಭೆಯ ಮಾಜಿ‌ ಸದಸ್ಯರೊಬ್ಬರು ಗುಂಡು ಹೊಡೆದುಕೊಂಡು ಅತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ನಗರದಲ್ಲಿ ನಡೆದಿದೆ.
ಸರ್ವೋದಯ ಸಮಿತಿ‌ ಹಾಗೂ ಕಾಂಗ್ರೆಸ್ ಪ್ರಮುಖರೂ ಆಗಿದ್ದ ಕೋಡಿ ಚಂದ್ರಶೇಖರ್ (58) ಅವರೇ ಅವರೇ ಆತ್ಮಹತ್ಯೆಗೆ ಶರಣಾದವರಾಗಿದ್ದು, ಘಟನೆಗೆ ಪ್ರಮುಖ ಕಾರಣ ತಿಳಿದು ಬಂದಿಲ್ಲವಾದರೂ,‌ಅನಾರೋಗ್ಯದ‌ ಸಮಸ್ಯೆ ಇರಬಹುದು ಎಂದು ಅಂದಾಜಿಸಲಾಗಿದೆ.
ನಗರದ ಮೇಲಿನ ಗೌಡ ಸಮಾಜದ ಬಳಿಯ‌ ರಾಘವೇಂದ್ರ ದೇವಾಲಯದ ಸಮೀಪ ವಾಸವಿದ್ದ ಅವರು ಬುಧವಾರ ಬೆಳಗ್ಗೆ ತಮ್ಮ ಮಲಗುವ ಕೋಣೆಯಲ್ಲೇ ಗುಂಡು ಹೊಡೆದುಕೊಂಡು ಸಾವಿಗೆ ಶರಣಾಗಿದ್ದು, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಸಮಾಜಸೇವಕರೂ ಆಗಿದ್ದ ಚಂದ್ರಶೇಖರದ ಅವರು ಸದಾ ಶ್ವೇತ ವಸ್ತ್ರಧಾರಿಯಾಗಿಯೇ ಇರುವುದರೊಂದಿಗೆ ಸಾರ್ವಜನಿಕರಿಗೆ ಸರಕಾರಿ‌ ಕಚೇರಿಗಳಲ್ಲಿ‌ನ ಕೆಲಸ ಕಾರ್ಯಗಳನ್ನು ಮಾಡಿಸಿಕೊಡುವಲ್ಲಿ ನೆರವಾಗುತ್ತಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss