Monday, July 4, 2022

Latest Posts

NIMS ನ ಮಾಜಿ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ ಕಾರ್ಕಳ ಸುಬ್ಬರಾವ್ ಇನ್ನಿಲ್ಲ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಖ್ಯಾತ ವಿಕಿರಣಶಾಸ್ತ್ರಜ್ಞ, ನಿಮ್ಸ್ ನ ಮಾಜಿ ನಿರ್ದೇಶಕ ಕಾರ್ಕಳ ಸುಬ್ಬರಾವ್ ಅವರು ಇಂದು ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಸಿಕಂದರಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.
1925ರಲ್ಲಿ ಆಂಧ್ರಪ್ರದೇಶದ ಕೃಷ್ಣದಲ್ಲಿ ಜನಿಸಿದರು. ನಂತರ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಅವರಿಗೆ ಸರ್ಕಾರ 2000ದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.
ಅವರು 1956 ರಲ್ಲಿ ಭಾರತಕ್ಕೆ ಮರಳಿದರು, ಆದರೆ 1970 ರಲ್ಲಿ ಅಮೆರಿಕಗೆ ಹಿಂತಿರುಗಿದರು. ಅಲ್ಲಿ ಅವರು ವಿಕಿರಣಶಾಸ್ತ್ರಜ್ಞರಾಗಿ ಕೆಲಸ ಮಾಡಿದರು. ಬಳಿಕ ಮುಖ್ಯಮಂತ್ರಿ ಎನ್.ಟಿ. ರಾಮ್ ರಾವ್ ಅವರ ಕರೆಗೆ ಓಗೊಟ್ಟು ನಿಮ್ಸ್ ಅನ್ನು ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸೋಕೆ ಶ್ರಮಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss