ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ತಾಲಿಬಾನಿಗಳು ಅಫಘಾನಿಸ್ತಾನವನ್ನು ಆಕ್ರಮಿಸಿಕೊಳ್ಳುತ್ತಿದ್ದಂತೆಯೇ ಅಲ್ಲಿಂದ ಅಮೆರಿಕ ಸೇನೆ ತವರಿಗೆ ವಾಪಸ್ ಆಗಿರುವುದನ್ನು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದಾರೆ.
ಅಮೆರಿಕದ ವಿಶ್ವ ವ್ಯಾಪಾರ ಕೇಂದ್ರದ ಮೇಲೆ 2001 ಸೆಪ್ಟೆಂಬರ್ 11ರಂದು ಭಯೋತ್ಪಾದಕರು ನಡೆಸಿರುವ ದಾಳಿಯನ್ನು ಸ್ಮರಿಸಿರುವ ಡೊನಾಲ್ಡ್, ಅಮೆರಿಕ ಅಧ್ಯಕ್ಷ ಜೋ ಬಿಡನ್ ವಿರುದ್ಧ ಗುಡುಗಿದರು. ತಾಲಿಬಾನಿಗಳಿಗೆ ಹೆದರಿ ಅಫಘಾನಿಸ್ತಾನದಿಂದ ಸೇನೆಯನ್ನು ವಾಪಸ್ ಕರೆಸಿರುವುದನ್ನು ಟೀಕಿಸಿದರು.
ಸೆಪ್ಟೆಂಬರ್ 11ರ ದಾಳಿಯನ್ನು ಸ್ಮರಿಸುವ ಬಿಡನ್ ಭಾಷಣಗಳಲ್ಲಿ ಸೇನೆಯನ್ನು ವಾಪಸ್ ಕರೆಸಿರುವ ಬಗ್ಗೆ ಏಕೆ ಉಲ್ಲೇಖ ವಾಗಿಲ್ಲ. ಸೇನೆ ತವರಿಗೆ ಮರಳಿದ ನಂತರ ಅಪಘಾನಿಸ್ತಾನ ಸಂಪೂರ್ಣ ತಾಲಿಬಾನ್ ವಶವಾಗಿದೆ. ಇಂದು ಸಂಪೂರ್ಣ ಅಸಾಮರ್ಥ್ಯವಾಗಿದೆ ಎಂದು ವಾಗ್ದಾಳಿ ನಡೆಸಿದರು.