spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಸ್ತಿತ್ವಂ ಪ್ರತಿಷ್ಠಾನ ಕುಂಟಾರು, ಸಂಸ್ಕೃತ ಭಾರತಿ ಕಾಸರಗೋಡು: ಸಂಸ್ಕೃತ ಸಂಭಾಷಣ ವರ್ಗ ಉದ್ಘಾಟನೆ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್

ಅಸ್ತಿತ್ವಂ ಪ್ರತಿಷ್ಠಾನ ಕುಂಟಾರು ಇವರ ಸಹಯೋಗದೊಂದಿಗೆ ಸಂಸ್ಕೃತ ಭಾರತಿ ಕಾಸರಗೋಡು ಇವರ ವತಿಯಿಂದ ಸಾಮಾಜಿಕ ಜಾಲತಾಣ ಮುಖಾಂತರ ದಶದಿನಗಳ ಸಂಸ್ಕೃತ ಸಂಭಾಷಣ ವರ್ಗವು ನಡೆಯಿತು. ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ವೇದಮೂರ್ತಿ ಕಶೆಕೋಡಿ ಸೂರ್ಯನಾರಾಯಣ ಭಟ್ ಉದ್ಘಾಟಿಸಿದರು. ಕಹಳೆ ನ್ಯೂಸ್ ಸಂಸ್ಥಾಪಕ ಸಂಪಾದಕರಾದ ಶ್ರೀ ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಇವರು ಅತಿಥಿಗಳಾಗಿದ್ದರು.
ದಶ ದಿನಗಳ ಸಂಸ್ಕೃತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮಠದ ಪೀಠಾಧಿಪತಿಗಳಾದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡುತ್ತಾ ಸಂಸ್ಕೃತವು ದೇವ ಭಾಷೆ ಮಾತ್ರವಲ್ಲ ಭಾರತದ ಜೀವ ಭಾಷೆ,ಒಂದಷ್ಟು ಪಾಶ್ಚಿಮಾತ್ಯ ಮಾನಸಿಕತೆಯ ಜನರು ಅದನ್ನು ಮೃತಭಾಷೆ ಎಂದು ಹೀಯಾಳಿಸಿದರೂ ಅದೇ ಪಾಶ್ಚಿಮಾತ್ಯರು ಕಂಪ್ಯೂಟರ್ ತಂತ್ರಜ್ಞಾನಕ್ಕೆ ಪೂರಕವಾದ ಪ್ರಪಂಚದ ಒಂದೇ ಒಂದು ಭಾಷೆ ಸಂಸ್ಕೃತ ಎಂಬುವುದನ್ನು ಪ್ರತಿಪಾದಿಸಿದ್ದಾರೆ. ಇಂದು ನಮ್ಮ ಜೀವ ಭಾಷೆಯಾದ ಸಂಸ್ಕೃತವನ್ನು ಕೇವಲ ಬ್ರಾಹ್ಮಣರ,ವಿದ್ವಾಂಸರ,ಪುರೋಹಿತರ ಭಾಷೆಯೆಂದು ಬಿಂಬಿಸುವ ವರ್ಗದ ಜನರಿದ್ದಾರೆ.
ಆದರೆ ಅದು ಕೇವಲ ಆ ವರ್ಗದ ಭಾಷೆ ಮಾತ್ರವಲ್ಲ ಭಾರತದ ಎಲ್ಲ ವರ್ಗದ ಎಲ್ಲ ಜಾತಿಯ ಜನರಿಗೂ ಅಗತ್ಯವಾಗಿ ಸಂವಹನ ಮಾಧ್ಯಮಕ್ಕೆ ಅವಶ್ಯಕವಾದ ಭಾಷೆ. ಪ್ರತಿಯೊಬ್ಬರು ಈ ಭಾಷೆಯನ್ನು ಕಲಿಯಬೇಕು ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಸದುಪಯೋಗಪಡಿಸಿಕೊಂಡು ಸಂಸ್ಕೃತಭಾಷೆ ಅಮೃತ ಭಾಷೆ ಎಂಬುದನ್ನು ಪುನಃ ಜಗತ್ತಿನ ಮುಂದೆ ಸಾರಬೇಕು ಎಂದು ಹೇಳಿದರು.
ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳು ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತ ಭಾರತೀಯ ಕಾಸರಗೋಡು ಜಿಲ್ಲಾ ಸಂಯೋಜಕ ಎಸ್,ಎಂ,ಉಡುಪ-ಕುಂಟಾರು
ಶಿಬಿರದ ಸಂಸ್ಕೃತ ಅಧ್ಯಾಪಿಕೆ ಶ್ರೀಮತಿ ಸಂಧ್ಯಾ ವಿ ಕೆದಿಲಾಯ ಭಾಗವಹಿಸಿದ್ದರು. ಮಂಗಳೂರು ವಿಭಾಗ ಸಂಯೋಜಕರಾದ ಸತ್ಯನಾರಾಯಣ ಅವರು ಸಂಸ್ಕೃತ ಭಾರತಿಯ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss