Wednesday, October 5, 2022

Latest Posts

ಕಂಟ್ರಿ ಪಿಸ್ತೂಲ್ ಹೊಂದಿದ್ದ ‌ನಾಲ್ವರ ಬಂಧನ 

ದಿಗಂತ ವರದಿ ವಿಜಯಪುರ:

ನಗರದಲ್ಲಿ ಅಕ್ರಮವಾಗಿ ಮಾರಾಟಕ್ಕೆ ತಂದಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, 3 ಕಂಟ್ರಿ ಪಿಸ್ತೂಲ್ ಸೇರಿ 4 ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಎಚ್‌.ಡಿ. ಆನಂದಕುಮಾರ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಧ್ಯಪ್ರದೇಶದಿಂದ ಕಂಟ್ರಿ ಪಿಸ್ತೂಲ್, ಜೀವಂತ ಗುಡುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ‌ನಗರಕ್ಕೆ ತಂದು, ಇಟ್ಟುಕೊಂಡಿದ್ದ ಕಿರಣ ರಮೇಶ ರೂಗಿ, ಕಿರಣ ದಾನಪ್ಪ ಗಾಯಕವಾಡನನ್ನು ಬಂಧಿಸಲಾಗಿದೆ ಎಂದರು‌

ಇಲ್ಲಿನ ಜಮಖಂಡಿ ರಸ್ತೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕಿರಣ ರೂಗಿ ಓಡಾಟ ಮಾಡುತ್ತಿದ್ದ ವೇಳೆಯಲ್ಲಿ ಗಾಂಧಿಚೌಕ್ ಪೊಲೀಸರು ಖಚಿತ ಮಾಹಿತಿ ಆಧರಿಸಿ ದಾಳಿಗೈದು ಪರಿಶೀಲಿಸಿದ್ದಾಗ, ಮಧ್ಯಪ್ರದೇಶದಿಂದ 3 ಪಿಸ್ತೂಲ್, 4 ಜೀವಂತ ಗುಂಡುಗಳನ್ನು ಮಾರಾಟಕ್ಕೆ ತಂದಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದರು.

ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ಕಂಟ್ರಿ ಪಿಸ್ತೂಲ್, ಒಂದು ಜೀವಂತ ಗುಂಡು ಜಪ್ತಿ ಮಾಡಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರೇಶ ಲಕ್ಷ್ಮಣ ರಾಠೋಡ, ವಿಜಯ ಉರ್ಫ್ ಪಿಂಟೂ ಲಕ್ಷ್ಮಣ ರಾಠೋಡ ಎಂಬವರನ್ನು ಬಂಧಿಸಲಾಗಿದೆ. ಈ ಇಬ್ಬರು ಆರೋಪಿಗಳಿಂದ ಒಂದು ಪಿಸ್ತೂಲ್, ಒಂದು ಜೀವಂತ ಗುಂಡು, ಒಂದು ಕಾರು, ಒಂದು ಲಾಂಗ್ ವಶಕ್ಕೆ ಪಡೆಯಲಾಗಿದೆ ಎಂದರು.

ಎಎಸ್ಪಿ ರಾಮ ಅರಸಿದ್ದಿ ಸೇರಿದಂತೆ ಪೊಲೀಸ್ ಅಧಿಕಾರಿಗಳಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!