ಹೊಸದಿಗಂತ ಆನ್ಲೈನ್ ಡೆಸ್ಕ್:
ಮಂಗಳೂರಿನ ಕೋಡಿಕರೆ ರೈಲ್ವೆ ಫ್ಲೈ ಓವರ್ ಕೆಳಗೆ ರೈಲಿನ ಹೊಡೆತಕ್ಕೆ ಸಿಲುಕಿ ಮರಿ ಸೇರಿ ನಾಲ್ಕು ಬೀಡಾಡಿ ಎಮ್ಮೆ ಮೃತಪಟ್ಟಿವೆ.
ಶೀಘ್ರವೇ ಸ್ಥಳಕ್ಕೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಭೇಟಿ ನೀಡಿದ್ದಾರೆ. ವೈದ್ಯರಿಗೆ ಮತ್ತು ಪೊಲೀಸ್ಗೆ ಕಾರ್ಯಕರ್ತರು ಮಾಹಿತಿ ನೀಡಿದ್ದಾರೆ. ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.