Friday, July 1, 2022

Latest Posts

ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಶಿಕ್ಷಣಕ್ಕೆ ನಾಲ್ಕು ಕಾಲೇಜುಗಳಿಗೆ ಅನುಮತಿ: ಸಿಎಂ ಬೊಮ್ಮಾಯಿ

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇಂಜಿಯರಿಂಗ್​ ಕಾಲೇಜುಗಳಲ್ಲಿ 4 ವರ್ಷದದ ಬಿಎಸ್ಸಿ ಆನರ್ಸ್ ಆರಂಭಿಸಲು ಅನುಮತಿ ಪತ್ರ ನೀಡಲಾಗಿದೆ. ನೂತಕ ಶಿಕ್ಷಣ ಪದ್ಧತಿ (NEP) ಅನುಸಾರ ಇಂಜಿನಿಯರಿಂಗ್ ಶಿಕ್ಷಣ ಅನುಷ್ಠಾನ ಮಾಡಲಾಗುವುದು ಎಂದು ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಶಿಕ್ಷಣಕ್ಕೆ ಒಪ್ಪಿಗೆ ನೀಡಲಾಗಿದೆ. ಈ ಸಂಬಂಧ ನಾಲ್ಕು ಕಾಲೇಜುಗಳಿಗೆ ಅನುಮತಿ ಪತ್ರವನ್ನು ನೀಡಲಾಗಿದೆ. ಕನ್ನಡ ಭಾಷೆಯಲ್ಲಿ ಇಂಜಿನಿಯರಿಂಗ್ ಸಿಲಬಸ್ ಬಿಡುಗಡೆ ಮಾಡಿರುವುದು ಹೊಸ ಅಧ್ಯಾಯವಾಗಿದೆ. ಇದೊಂದು ಐತಿಹಾಸಿಕ ದಿನ ಎಂದು ಸಿಎಂ ಸಂತಸ ಹಂಚಿಕೊಂಡಿದ್ದಾರೆ.
ಅತ್ಯಂತ ಪ್ರಗತಿಪರವಾಗಿ ಎನ್​ಇಪಿ ಜಾರಿಗೊಳಿಸುವಲ್ಲಿ ಸಚಿವ ಡಾ. ಅಶ್ವತ್ಥ್​​ ನಾರಾಯಣ ಯಶಸ್ವಿಯಾಗಿದ್ದಾರೆ. ಎನ್​ಇಪಿ ಅನುಸಾರ ಇಂಜಿನಿಯರಿಂಗ್ ಶಿಕ್ಷಣ ಅನುಷ್ಠಾನ ಮಾಡುತ್ತೇವೆ ಎಂದು ಬೊಮ್ಮಾಯಿ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ದೊಡ್ಡ ಬದಲಾವಣೆ ಆಗಲಿದೆ. ಕರ್ನಾಟಕದ ತಾಂತ್ರಿಕ ಶಿಕ್ಷಣದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ. ಇಷ್ಟು ದೊಡ್ಡ ಪ್ರಮಾಣದ ಬದಲಾವಣೆ ಯಾವತ್ತೂ ಆಗಿಲ್ಲ ಎಂದು ಅವರು ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss