ನಾಲ್ಕು ದಿನಗಳ ಪ್ರವಾಸ: ನಾಳೆ ಭಾರತಕ್ಕೆ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುಎಸ್‌ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ನಾಳೆಯಿಂದ ನಾಲ್ಕು ದಿನಗಳ ಭಾರತದ ಪ್ರವಾಸ ಕೈಗೊಂಡಿದ್ದಾರೆ. ವ್ಯಾನ್ಸ್ ಅವರು ತಮ್ಮ ಭಾರತೀಯ ಮೂಲದ ಪತ್ನಿ ಉಷಾ ಮತ್ತು ಮೂವರು ಮಕ್ಕಳಾದ ಇವಾನ್, ವಿವೇಕ್ ಮತ್ತು ಮಿರಾಬೆಲ್ ನಾಳೆ ಭಾರತಕ್ಕೆ ಬರಲಿದ್ದಾರೆ.

ಬೆಳಗ್ಗೆ 10 ಗಂಟೆ ಸುಮಾರಿಗೆ ದೆಹಲಿಯ ಪಾಲಂ ಏರ್‌ಪೋರ್ಟ್‌ಗೆ ಬಂದಿಳಿಯಲಿದ್ದು, ಕೇಂದ್ರದ ಹಿರಿಯ ಸಚಿವರು ರಾಜಸ್ಥಾನಿ ಶೈಲಿಯಲ್ಲಿ ವ್ಯಾನ್ಸ್‌ ಕುಟುಂಬವನ್ನು ಸ್ವಾಗತಿಸಲಿದ್ದಾರೆ. ಬಳಿಕ ದೆಹಲಿ ಜೊತೆಗೆ ಜೈಪುರ ಮತ್ತು ಆಗ್ರಾಕ್ಕೆ ವ್ಯಾನ್ಸ್‌ ಪ್ರಯಾಣಿಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!