ದಿಗಂತ ವರದಿ ವಿಜಯಪುರ:
ನಿಂತ ಲಾರಿಗೆ ಕಾರು ಡಿಕ್ಕಿಯಾಗಿ ನಾಲ್ಕು ಮಂದಿ ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ವಿಜಯಪುರ ತಾಲೂಕಿನ ಹೊನಗನಹಳ್ಳಿ ಬಳಿಯ ಹೆದ್ದಾರಿಯಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಮೃತಪಟ್ಟವರನ್ನು ವಿಜಯಪುರದ ಮಂಜುನಾಥ, ಸಾವಿತ್ರಿ, ಆರಾಧ್ಯ ಹಾಗೂ ಮಹಾರಾಷ್ಟ್ರ ಬಿಡ್ ಗ್ರಾಮದ ಲಾರಿ ಚಾಲಕ ಸಾಹಿರ್ ಎಂದು ಗುರುತಿಸಲಾಗಿದೆ. ವಿಜಯಪುರದ ನಿವಾಸಿಗಳು ಗೋವಾದಿಂದ ಕಾರಿನಲ್ಲಿ ಮರಳಿ ಬರುತ್ತಿರುವಾಗ, ನಿಂತ ಲಾರಿಗೆ ಡಿಕ್ಕಿಯಾಗಿದ್ದು, ನಾಲ್ಕು ಮಂದಿ ಸ್ಥಳದಲ್ಲೇ ಸಾವಿಗೀಡಾಗುವಂತಾಗಿದೆ.
ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ, ಪರಿಶೀಲಿಸಿದ್ದಾರೆ . ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.