Monday, August 15, 2022

Latest Posts

BREAKING NEWS| ಇಂದು ಮತ್ತೆ ಜಮ್ಮುವಿನಲ್ಲಿ ನಾಲ್ಕು ಡ್ರೋನ್ ಗಳು ಪತ್ತೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇಂದು ಬೆಳಗ್ಗೆ ಜಮ್ಮುವಿನ ಸಾಂಬಾ ಮತ್ತು ವಿವಿಧ ಸ್ಥಳಗಳಲ್ಲಿ ನಾಲ್ಕು ಶಂಕಿತ ಡ್ರೋನ್ ಗಳು ಪತ್ತೆಯಾಗಿವೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದೆ.

ನಿನ್ನೆ (ಜುಲೈ15) ರಾತ್ರಿ  ಸಾಂಬಾ ಮತ್ತು ಕಥುವಾ ಜಿಲ್ಲೆಗಳಲ್ಲಿ ತಲಾ ಒಂದು ಸಂಶಯಾತ್ಮಕ ಡ್ರೋನ್ ಗಳ ಹಾರಾಟ ಪತ್ತೆಯಾಗಿದೆ. ಸಶಸ್ತ್ರ ಪಡೆಗಳು ಕಾರ್ಯಾಚರಣೆ ನಡೆಸಿ ಎಂಟು ಸುತ್ತು ಗುಂಡು ಹಾರಿಸಿದೆ. ಇಂದು ಬೆಳಿಗ್ಗೆಯೂ ಇಲ್ಲಿನ ಭಾರತೀಯ ವಾಯುಪಡೆ ನಿಲ್ದಾಣದ ಬಳಿ ಡ್ರೋನ್ ಕಂಡುಬಂದಿದೆ ಎಂದು ವರದಿಯಾಗಿದೆ.

ಕಳೆದ ಬುಧವಾರ  ಲೈನ್ ಆಫ್ ಕಂಟ್ರೋಲ್ ನ ಪಲ್ಲಾನವಾಲ ಸೆಕ್ಟರ್ ಬಳಿ ರಾತ್ರಿ ಒಂದು ಡ್ರೋನ್ ಪತ್ತೆಯಾಗಿದೆ. ಡ್ರೋನ್ ಕಂಡ ಭದ್ರತಾ ಸಿಬ್ಬಂದಿ ಅದರತ್ತ ಕೆಲವು ಸುತ್ತು ಗುಂಡು ಹಾರಿಸಿದ್ದಾರೆ. ಕೂಡಲೇ ಡ್ರೋನ್ ಪಾಕಿಸ್ಥಾನ ಗಡಿ ಭಾಗಕ್ಕೆ ತೆರಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss