Sunday, June 26, 2022

Latest Posts

ಫೆ. 20 ನಂತರ 2ನೇ ಹಂತದ ಮೇಕೆದಾಟು ಪಾದಯಾತ್ರೆ ಆರಂಭ

ಹೊಸದಿಗಂತ ವರದಿ,ರಾಮನಗರ :

ಕೆಲವರು ಸುಳ್ಳನ್ನ ಅವರ ಮನೆ ದೇವರು ಮಾಡಿಕೊಂಡಿದ್ದಾರೆ. ಯಾರು ಅಂತ ಹೇಳಲು ಹೋಗಲ್ಲ ಎಂದು ರಾಮನಗರ ತಾಲೂಕಿನ ಬಸವನಪುರದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ತಾಲ್ಲೂಕಿನ ಕಸಬಾ ಹೋಬಳಿ ಬಸವನಪುರ ಗ್ರಾಮದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಮೇಕೆದಾಟು ಪಾದಯಾತ್ರೆ ತಡೆದಿದ್ದಾರೆ, ಎಷ್ಟು ದಿನ ತಡೆಯುತ್ತಾರೆ.
ಫೆಬ್ರವರಿ 20ರ ನಂತರ ಮೇಕೆದಾಟು 2ನೇ ಹಂತದ ಪಾದಯಾತ್ರೆ ಆರಂಭ ಮಾಡುತ್ತೇವೆ ಎಂದು ಹೇಳಿದರು.
ಕೆಲವರು ಸುಳ್ಳನ್ನ ಅವರ ಮನೆ ದೇವರು ಮಾಡಿಕೊಂಡಿದ್ದಾರೆ. ಯಾರು ಅಂತ ಹೇಳಲು ಹೋಗಲ್ಲ ಎಂದು ಇದೇ ವೇಳೆ ಹೆಚ್.ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ.
ಒಂದು ವರ್ಷದಿಂದ ಜಿಲ್ಲೆ ಕಾಣುತ್ತಿದೆ, ಈ ಮುಂಚೆ ಕಾಣ್ತಿರಲಿಲ್ಲ. ಸುಳ್ಳು ಹೇಳಿದ್ದಾರೆ ಈ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಉಳ್ತಾರ್ ದೊಡ್ಡಿ, ದೊಡ್ಡಮಣ್ಣಗುಡ್ಡೆ, ಮಾಕಳಿ, ತೆಂಗಿನಕಲ್ಲು ಅರಣ್ಯ ಪ್ರದೇಶದ ಬಗ್ಗೆ ಮಾತನಾಡುತ್ತಾರೆ. ಬಹಳ ಸಂತೋಷವಾಗಿದೆ ಅವರು ಇಷ್ಟೆಲ್ಲ ತಿಳಿದುಕೊಂಡಿದ್ದಾರೆ. ಹದಿನೈದು ವರ್ಷವಾದ ನಂತರವಾದರು ತಿಳಿದುಕೊಂಡಿದ್ದಾರೆ. ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಅವರಿಗೆ ಅಭಿನಂದನೆ ಎಂದು ರಾಮನಗರ ತಾಲೂಕಿನ ಬಸವನಪುರದಲ್ಲಿ ಡಿ.ಕೆ. ಸುರೇಶ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss