Tuesday, July 5, 2022

Latest Posts

ಗೂಗಲ್‌ಗೆ 948 ಕೋಟಿ ದಂಡ ವಿಧಿಸಿದ ಫ್ರಾನ್ಸ್‌

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಗೂಗಲ್, ಆನ್‌ಲೈನ್ ಜಾಹೀರಾತುಗಳನ್ನು ಪ್ರಕಟಿಸುವುದಕ್ಕಾಗಿ ತನ್ನ ಪ್ರಬಲ ಮಾರುಕಟ್ಟೆ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ ಎಂಬುದನ್ನು ಪತ್ತೆ ಮಾಡಿರುವ ಫ್ರಾನ್ಸ್‌ನ ಸ್ಪರ್ಧಾ ನಿಯಂತ್ರಕವು ಗೂಗಲ್‌ಗೆ 220 ಮಿಲಿಯನ್ ಯೂರೊ (ಸುಮಾರು 1948 ಕೋಟಿ) ದಂಡ ವಿಧಿಸಿದೆ.
ಈ ಮೂಲಕ ಅಮೆರಿಕ ಮೂಲದ ಗೂಗಲ್ ವಿರುದ್ಧ ಯೂರೋಪ್ ಒಕ್ಕೂಟವು ಕಠಿಣ ನಿಲುವು ತಾಳಿದ್ದು, ಆನ್‌ಲೈನ್ ಜಾಹೀರಾತು ಮಾರಾಟದಲ್ಲಿ ಗೂಗಲ್ ಏಕಸ್ವಾಮ್ಯವನ್ನು ಹೊಂದಿದೆ ಎಂದು ನ್ಯೂಸ್ ಕಾರ್ಪ್, ಫ್ರೆಂಚ್ ಡೈಲಿ ಲೆ ಫಿಗರೊ ಮತ್ತು ಬೆಲ್ಜಿಯಂನ ಗ್ರೂಪ್ ರೊಸೆಲ್ ಎಂಬ ಮೂರು ಮಾಧ್ಯಮ ಗುಂಪುಗಳು ತಲುಪಿದ ಒಮ್ಮತದ ಭಾಗವಾಗಿ ಈ ದಂಡ ವಿಧಿಸಲಾಗಿದೆ.
ಗೂಗಲ್ ವಿರುದ್ಧ ಫ್ರಾನ್ಸ್ ವಿಧಿಸಿರುವ ದಂಡವು ಆಯಂಟಿಟ್ರಸ್ಟ್ ಪ್ರಕರಣದಲ್ಲಿ ಹಿಂದಿನ ಅತಿದೊಡ್ಡ ದಂಡಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ಪಾಶ್ಚಿಮಾತ್ಯ ದೇಶಗಳ ಡಿಜಿಟಲ್ ಸೇವೆಗಳ ಅತ್ಯಂತ ಸಕ್ರಿಯ ನಿಯಂತ್ರಕ ಎಂದು ಹೇಳಲಾಗುವ ಯುರೋಪಿಯನ್ ಯೂನಿಯನ್ ಆಂಟಿಟ್ರಸ್ಟ್ ಸಂಸ್ಥೆ ಮುಖ್ಯಸ್ಥೆ ಮಾರ್ಗರೇಟ್ ವೆಸ್ಟಾಗರ್ ಹೇಳಿದ್ದಾರೆ.
‘ಯುರೋಪ್‌ನಲ್ಲಿ, ಕಂಪನಿಗಳು ಯುರೋಪಿಯನ್ ಆಗಿರಲಿ ಅಥವಾ ಇಲ್ಲದಿರಲಿ ಅರ್ಹತೆಗಳ ಮೇಲೆ ಸ್ಪರ್ಧಿಸಬೇಕು’ ಎಂದು ಅವರು ಹೇಳಿದ್ಧಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss