ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ರಾಜಕಾರಣಿಗಳು, ಸಿನಿಮಾ ತಾರೆಗಳ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಹಣ ಪೀಕುವ ಘಟನೆಗಳು ಹೆಚ್ಚಾಗುತ್ತಲ್ಲೇ ಇದ್ದು, ಇದೀಗ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಖಾತೆ ತೆರೆದು ಹಣದ ಬೇಡಿಕೆ ಇಟ್ಟಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ನನ್ನ ಹೆಸರು ದುರ್ಬಳಕೆ ಮಾಡಿಕೊಂಡು ನಕಲಿ ಖಾತೆ ಸೃಷ್ಟಿಸಿ ನಾನು ಹಣದ ಸಹಾಯ ಕೇಳುತ್ತಿದ್ದೇನೆಂದು ಸುಳ್ಳು ವದಂತಿ ಹಬ್ಬಿಸಿದ್ದಾರೆ. ಇದು ಸಂಪೂರ್ಣವಾಗಿ ಸುಳ್ಳು. ಯಾರೊಬ್ಬರೂ ಇಂತಹ ವಂಚನೆಗೆ ಒಳಗಾಗಬೇಡಿ. ಈ ಕುರಿತು ಸೈಬರ್ ಕ್ರೈಮ್ ಗೆ ದೂರು ನೀಡುವ ಬಗ್ಗೆ ಚಿಂತನೆ ನಡೆಸಿದ್ದೇನೆ.
ಚಾಟ್ ನಲ್ಲಿ ಏನಿದೆ? ಯಾರೋ ಕಿಡಿಗೇಡಿಗಳು ಸಚಿವರ ನಕಲಿ ಖಾತೆಯಿಂದ ವ್ಯಕ್ತಿಯೊಬ್ಬರಿಗೆ ಮೆಸೇಜ್ ಮಾಡಿದ್ದಾರೆ.
ಈ ವೇಳೆ ನನಗೆ ಸಹಾಯವಾಗಬೇಕಿತ್ತು. ನನ್ನ ಸ್ನೇಹಿತನಿಗೆ ಹಣ ಕಳುಹಿಸಲು ಸಾಧ್ಯವೇ ಎಂದು ಕೇಳಿ 10 ಸಾವಿರ ರೂ. ಗಳಿಗೆ ಬೇಡಿಕೆ ಇಟ್ಟಿದ್ದಾರೆ.