ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
‘ಕೋವಿಡ್ನಿಂದ ಮೃತಪಟ್ಟವರ ಉಚಿತ ಅಂತ್ಯ ಸಂಸ್ಕಾರ ಗಿಡ್ಡೇನಹಳ್ಳಿಗೆ ಹೋಗುವ ದಾರಿ..
ಕೋವಿಡ್ನಿಂದ ಮೃತಪಟ್ಟವರನ್ನು ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ಅಂತ್ಯಸಂಸ್ಕಾರ ಮಾಡಲು ಜಿಲ್ಲಾಡಳಿತ ವತಿಯಿಂದ ವ್ಯವಸ್ಥೆ ಮಾಡಿರುವ ಈ ಕಾರ್ಯಕ್ಕೆ ಉಚಿತವಾಗಿ ನೀರು,ಕಾಫಿ,ಟೀ,ತಿಂಡಿ,ಊಟದ ವ್ಯವಸ್ಥೆಯನ್ನು ಮಾಡಲಾಗಿದೆ’ ಎನ್ನುವ ಫ್ಲೆಕ್ಸ್ ಟ್ರೋಲ್ ಆಗುತ್ತಿದೆ.
ಫ್ಲೆಕ್ಸ್ನಲ್ಲಿ ರಾಜಕೀಯ ನಾಯಕರ ನಗುಮುಖದ ಫೋಟೊ ಹಾಕಿದ್ದು, ಸಾವಿನ ಮನೆಯಲ್ಲೂ ನಗುತ್ತಿದ್ದಾರೆ ಎಂಬ ಚರ್ಚೆ ಹುಟ್ಟುಹಾಕಿದೆ. ಈ ಫ್ಲೆಕ್ಸ್ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ . ಇಂಥ ಸಂದರ್ಭದಲ್ಲಿ ಸಹಾಯ ಮಾಡಿದರೂ, ನಾವು ಮಾಡಿದೆವು ಎಂದು ಹೇಳಿಕೊಳ್ಳಲು ಕೆಲವರು ಇಷ್ಪಪಡುವುದಿಲ್ಲ. ಆದರೆ ಹಾಸಿಗೆ ನೀಡದೆ ಜನರನ್ನು ಕೊಂದು ಇದೀಗ ನಗುತ್ತಿದ್ದಾರೆ ಎಂದು ಹಲವರು ದೂಷಿಸಿದ್ದಾರೆ.