Tuesday, August 16, 2022

Latest Posts

ಕೋವಾಕ್ಸಿನ್ ಲಸಿಕೆ ಸೂತ್ರವನ್ನು ಬಯಸುವ ಕಂಪನಿಗಳಿಗೆ ಭಾರತ್ ಬಯೋಟೆಕ್ ಯಿಂದ ಮುಕ್ತ ಆಹ್ವಾನ: ಕೇಂದ್ರ ಆರೋಗ್ಯ ಸಚಿವಾಲಯ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಕೊರೋನಾ ಸಂಕಷ್ಟದಲ್ಲಿ ಲಸಿಕೆಗಳ ಅಭಾವದ ಕೂಗು ಕೇಳಿಸುತ್ತಿದ್ದು, ಈ ಹಿನ್ನೆಲೆ ಉತ್ಪಾದನೆಯನ್ನ ಹೆಚ್ಚಿಸಲು ಕೋವಿಡ್-19 ಲಸಿಕೆಗಳ ಸೂತ್ರವನ್ನು ಇತರ ತಯಾರಕರೊಂದಿಗೆ ಹಂಚಿಕೊಳ್ಳುವಂತೆ ಹಲವಾರು ರಾಜ್ಯಗಳು ಕೇಂದ್ರವನ್ನು ಒತ್ತಾಯಿಸಿದ್ದು, ಭಾರತ್ ಬಯೋಟೆಕ್ ಅವರೊಂದಿಗೆ ಚರ್ಚಿಸಿದಾಗ ಇದನ್ನು ಸ್ವಾಗತಿಸಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್ ಅವರು ಹೇಳಿದ್ದಾರೆ.

ಕೊವಾಕ್ಸಿನ್ʼ ನ್ನು ಉತ್ಪಾದನೆಗಾಗಿ ಇತರ ಕಂಪನಿಗಳಿಗೆ ನೀಡಬೇಕು ಎಂದು ಜನರು ಹೇಳುತ್ತಾರೆ. ಕೊವಾಕ್ಸಿನ್ ಉತ್ಪಾದನಾ ಕಂಪನಿ (ಭಾರತ್ ಬಯೋಟೆಕ್) ಇದನ್ನು ಸ್ವಾಗತಿಸಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಈ ಲಸಿಕೆಯ ಅಡಿಯಲ್ಲಿ ಲೈವ್ ವೈರಸ್ ನಿಷ್ಕ್ರಿಯವಾಗಿದೆ ಮತ್ತು ಇದನ್ನು ಬಿಎಸ್‌ಎಲ್3 ಲ್ಯಾಬ್ಗಳಲ್ಲಿ ಮಾತ್ರ ಮಾಡಲಾಗುತ್ತದೆ ಎಂದರು.

ಇಲ್ಲಿ ಮಾಡುವ ತಂತ್ರವನ್ನು ಯಾವ ಕಂಪನಿಯೂ ಹೊಂದಿಲ್ಲ. ಇದನ್ನು ಮಾಡಲು ಬಯಸುವ ಕಂಪನಿಗಳಿಗೆ ನಾವು ಮುಕ್ತ ಆಹ್ವಾನವನ್ನು ನೀಡುತ್ತೇವೆ. ಈ ಮೂಲಕ ಕೊವಾಕ್ಸಿನ್ ತಯಾರಿಸಲು ಬಯಸುವ ಕಂಪನಿಗಳು ಒಟ್ಟಿಗೆ ಮಾಡಬೇಕು, ಜೊತೆಗೆ ಸಾಮರ್ಥ್ಯ ಹೆಚ್ಚಿಸಲು ಸರ್ಕಾರ ಸಹಾಯ ಮಾಡುತ್ತದೆ ಎಂದು ಹೇಳಿದರು.

ಒಟ್ಟಾರೆಯಾಗಿ, ಆಗಸ್ಟ್-ಡಿಸೆಂಬರ್ ನಡುವೆ ಭಾರತದಲ್ಲಿ ಮತ್ತು ಭಾರತೀಯರಿಗಾಗಿ 216 ಕೋಟಿ ಡೋಸ್ ಲಸಿಕೆಗಳನ್ನು ತಯಾರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಲಸಿಕೆ ಎಲ್ಲರಿಗೂ ಲಭ್ಯವಾಗುವುದರಲ್ಲಿ ಸಂದೇಹವಿಲ್ಲ ಎಂದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss