ನೌಕರರ ವಲಸೆ ತಡೆಯಲು ಹೀಗೆಲ್ಲಾ ಮಾಡಬಹುದಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದಿನ ದಿನಮಾನಗಳಲ್ಲಿ ಹೆಚ್ಚಿನ ಸವಲತ್ತುಗಳನ್ನು ಬಯಸಿ ಉದ್ಯೋಗಿಗಳು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಹಾರುವುದು ಸರ್ವೇಸಾಮಾನ್ಯ. ಅದರಲೂ ಐಟಿ ಕ್ಷೇತ್ರದಲ್ಲಿ ಈ ವಲಸೆಗಳು ಹೆಚ್ಚು. ಪ್ರತೀ ಕಂಪನಿಗಳೂ ಕೂಡ ಪ್ರತಿಭೆಗಳಿಗಾಗಿ ಗಾಳ ಹಾಕುತ್ತಿರುತ್ತವೆ. ಕೆಲವು ಕಂಪನಿಗಳಿಗೆ ಹೊಸ ಪ್ರತಿಭೆಗಳು ಸಿಕ್ಕಿ ಲಾಭವಾದರೆ ಪ್ರತಿಭೆಗಳನ್ನು ಕಳೆದಕೊಂಡ ಕೆಲವು ಕಂಪನಿಗಳಿಗೆ ಇದು ಋಣಾತ್ಮಕವಾಗಿ ಪರಿಣಮಿಸುತ್ತದೆ.

ಈ ನೌಕರರ ʼವಲಸೆʼಯನ್ನು ತಡೆಯಲು ಮದುರೈನ ಕಂಪನಿಯೊಂದು ಹೊಸ ಪ್ರಯತ್ನವನ್ನು ಶುರು ಮಾಡಿ ಅದರಲ್ಲಿ ಸಫಲವೂ ಆಗಿದೆ. ತಮ್ಮ ಕಂಪನಿಯಲ್ಲಿರುವ ನೌಕರರನ್ನು ಉಳಿಸಿಕೊಳ್ಳಲು ಶ್ರೀ ಮೂಕಾಂಬಿಕಾ ಇನ್ಫೋಸೊಲ್ಯೂಷನ್ಸ್ ವಿನೂತನ ಸವಲತ್ತುಗಳನ್ನು ನೀಡುತ್ತದೆ. 750 ನೌಕರರನ್ನು ಹೊಂದಿರುವ ಈ ಕಂಪನಿ ಪ್ರತಿ ವರ್ಷವೂ ಎರಡುಬಾರಿ 6-8% ದಷ್ಟು ಸಂಬಳವನ್ನು ಹೆಚ್ಚುಮಾಡುತ್ತದೆ.

ಕೇವಲ ಇದೊಂದೇ ಆದರೆ ಹೆಚ್ಚೇನೂ ವಿಶೇಷವಲ್ಲ. ಆದರೆ ವಿಶೇಷವಾದ ಸಂಗತಿ ಇನ್ನೊಂದಿದೆ. ಇದು ತನ್ನ ನೌಕರರು ಮದುವೆಯಾದಾಗ ಅವರಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತದೆ. ಅದೂ ಅಲ್ಲದೇ ಇನ್ನೂ ಮದುವೆಯಾಗದ ತನ್ನ ನೌಕರರಿಗೆ ʼಸಂಗಾತಿʼಯನ್ನು ಹುಡಿಕಿಕೊಡುತ್ತದೆ. ಸಾಮಾನ್ಯವಾಗಿ ಗ್ರಾಮೀಣ ಭಾಗದಿಂದ ಬಂದಿರುವ ಉದ್ಯೋಗಿಗಳಿಗೆ ಸೂಕ್ತ ಸಂಗಾತಿಗಳನ್ನು ಹುಡುಕಿಕೊಳ್ಳುವುದು ಕಷ್ಟವಾಗುತ್ತದ. ಹೀಗಾಗಿ ಈ ಕಂಪನಿಯು ತನ್ನ ಮಿತ್ರರ ಸಾಲಿನಲ್ಲಿರುವ ಕೆಲವು ಮದುವೆ ದಲ್ಲಾಳಿಗಳ ಮೂಲಕ ಮದುವೆ ಮಾಡಿಕೊಳ್ಳಲು ತನ್ನ ನೌಕರರಿಗೆ ಉಚಿತ ಮ್ಯಾಚ್‌ ಮೇಕಿಂಗ್‌ ಸೇವೆಗಳನ್ನೂ ನೀಡುತ್ತದೆ.

ಇದರ ಪರಿಣಾಮವಾಗಿ ಕಳೆದ ಕೆಲ ವರ್ಷಗಳಿಂದ ನೌಕರರ ವಲಸೆಯು 10% ಗಿಂತಲೂ ಕಡಿಮೆಯಾಗಿದೆ ಎನ್ನುತ್ತದೆ ಕಂಪೆನಿ. ಆ ಮೂಲಕ ಕಂಪೆನಿಯು ಉದ್ಯೋಗಿಗಳ ವಲಸೆಯನ್ನು ಯಶಸ್ವಿಯಾಗಿ ತಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!