Sunday, August 14, 2022

Latest Posts

ಬೀದರ್| 78 ಜನರ ಉಚಿತ ಆರೋಗ್ಯ ತಪಾಸಣೆ

ಹೊಸದಿಗಂತ ವರದಿ, ಬೀದರ್:

ಶ್ರೀ ಸಿದ್ಧೇಶ್ವರ ಟ್ರಸ್ಟ್ ವತಿಯಿಂದ ಭಾಲ್ಕಿ ತಾಲ್ಲೂಕಿನ ಚಳಕಾಪೂರ ಗ್ರಾಮದ ಸಿದ್ಧಾರೂಢ ಮಠದಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ 78 ಜನರ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು.
ಡಾ. ಆಯುಷಿ ಅವರು ಸಾಮಾನ್ಯ ರೋಗಗಳು, ಮಧುಮೇಹ, ಕೀಲು ನೋವು ಮೊದಲಾದವುಗಳ ತಪಾಸಣೆ ನಡೆಸಿ, ಉಚಿತ ಔಷಧಿಯನ್ನೂ ನೀಡಿದರು.
ಶಿಬಿರಕ್ಕೆ ಚಾಲನೆ ನೀಡಿದ ಶ್ರೀ ಸಿದ್ಧೇಶ್ವರ ಟ್ರಸ್ಟ್ ಅಧ್ಯಕ್ಷ ಶಶಿಕಾಂತ ಮೋದಿ ಮಾತನಾಡಿ, ಗ್ರಾಮದ ಬಡ ಜನರಿಗೆ ನೆರವಾಗಲು ಉಚಿತ ಆರೋಗ್ಯ ತಪಾಸಣೆ ಶಿಬಿರ ಸಂಘಟಿಸಲಾಗಿದೆ. ಮುಂದಿನ ದಿನಗಳಲ್ಲಿ ಟ್ರಸ್ಟ್‍ನಿಂದ ಇನ್ನೂ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಉದ್ದೇಶ ಇದೆ ಎಂದು ತಿಳಿಸಿದರು.
ಶಂಕ್ರಯ್ಯ ಸ್ವಾಮಿ, ಜಟ್ಟೆಪ್ಪ ರಾಂಪೂರ, ವೈಶಾಲಿ, ಸಾಗರ, ರಾಷ್ಟ್ರೀಯ ಬಸವ ದಳದ ಬೀದರ್ ದಕ್ಷಿಣ ಕ್ಷೇತ್ರ ಉಸ್ತುವಾರಿ ಮಹಾಲಿಂಗ ಸ್ವಾಮಿ ಚಟ್ನಳ್ಳಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss