ಫ್ರೆಂಚ್ ಓಪನ್: ಸಾನಿಯಾ ಜೋಡಿ 2ನೇ ಸುತ್ತಿಗೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ತಮ್ಮ ಕೊನೆಯ ಫ್ರೆಂಚ್ ಓಪನ್ ಆಡುತ್ತಿರುವ ಸಾನಿಯಾ ಮಿರ್ಜಾ ಮಿಕ್ಸೆಡ್ ಡಬಲ್ಸ್‌ನಲ್ಲಿ ಎರಡನೇ ಸುತ್ತಿಗೇರಿದ್ದಾರೆ.
ತಮ್ಮ ಜತೆಗಾರ ಇವಾನ್ ದೊಡಿಗ್ ಜತೆಗೂಡಿ ಸಾನಿಯಾ ಅವರು ಲಾರಾ ಸಿಗ್ಮಂಡ್ ಮತ್ತು ಸಾಂಟಿಯಾಗೋ ಗೊನ್ಸಾಲಿಜ್ ಜೋಡಿಯನ್ನು ಸೋಲಿಸಿದರು.
2015ರಲ್ಲಿ ಮಹೇಶ್ ಭೂಪತಿ ಜತೆಗೂಡಿ ಫ್ರೆಂಚ್ ಓಪನ್ ಮಿಕ್ಸೆಡ್ ಡಬಲ್ಸ್ ಗೆದ್ದಿದ್ದ ಸಾನಿಯಾ ಮಿರ್ಜಾ ತಮ್ಮ ನಿವೃತ್ತಿ ಘೋಷಿಸಿದ್ದು , ಕೊನೆಯದಾಗಿ ಫ್ರೆಂಚ್ ಓಪನ್‌ನಲ್ಲಿ ಆಡುತ್ತಿದ್ದಾರೆ.
ಸಾನಿಯಾ ಅವರು ಲೂಸಿ ಹ್ರಡೇಕಾ ಜತೆಗೂಡಿ ಮಹಿಳಾ ಡಬಲ್ಸ್‌ನಲ್ಲೂ ಆಡುತ್ತಿದ್ದಾರೆ.
ಇದೇ ವೇಳೆ, ರಾಫೆಲ್ ನಡಾಲ್ ಪುರುಷರ ಸಿಂಗಲ್ಸ್‌ನಲ್ಲಿ ಕೊರೆಂಟಿನ್ ರನ್ನು ಸೋಲಿಸಿ ಮುಂದಿನ ಸುತ್ತಿಗೇರಿದರು. ಈ ವಿಜಯವು ನಡಾಲ್ ಅವರ 300 ಗ್ರಾಂಡ್ ಸ್ಲಾಂ ಗೆಲುವಾಗಿದೆ.
ಇತ್ತೀಚೆಗೆ ಎರಡು ಟೂರ್ನಿಗಳಲ್ಲಿ ಪ್ರಮುಖ ಆಟಗಾರರನ್ನು ಸೋಲಿಸಿ ಹೆಸರು ಮಾಡಿರುವ 19ರ ಹರಯದ ಕಾರ್ಲೋಸ್ ಆಲ್ಕಾರೆಜ್ ಫ್ರೆಂಚ್ ಓಪನ್‌ನಲ್ಲಿ ಮೊದಲ ಗೆಲುವು ಸಾಧಿಸಲು ಹರಸಾಹಸ ಪಡಬೇಕಾಯಿತು. ಅವರು ತಮ್ಮದೇ ದೇಶದ ಆಲ್ಬರ್ಟ್ ರಾಮೋಸ್‌ರನ್ನು ಸೋಲಿಸಲು 5 ಸೆಟ್‌ಗಳಲ್ಲಿ ಪ್ರಯಾಸ ಪಡಬೇಕಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!