ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಶೋಭಾರಾಜ್ ಬಿಡುಗಡೆಗೆ ಆದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ನೇಪಾಳ ಸುಪ್ರೀಂಕೋರ್ಟ್ ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಶೋಭಾರಾಜ್ ಬಿಡುಗಡೆಗೆ ಆದೇಶಿಸಿದೆ.

19 ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಶೋಭರಾಜ್​​ಗೆ ವಯಸ್ಸಾಗಿರುವುದರಿಂದ ಆತನನ್ನು ಬಿಡುಗಡೆಗೆ ಕೋರ್ಟ್ ಆದೇಶ ನೀಡಿದೆ.
ಶೋಭರಾಜ್ ಇಬ್ಬರು ಅಮೆರಿಕನ್ ಪ್ರವಾಸಿಗಳನ್ನು ಹತ್ಯೆಗೈದ ಆರೋಪದಲ್ಲಿ 2003ರಿಂದ ನೇಪಾಳದ ಜೈಲಿನಲ್ಲಿದ್ದನು.

ಇದೀಗ ಜೈಲಿನಿಂದ ಬಂಧಮುಕ್ತನಾದ 15 ದಿನಗಳಲ್ಲಿ ಆತನನ್ನು ಗಡಿಪಾರು ಮಾಡಬೇಕೆಂದು ಉಚ್ಛ ನ್ಯಾಯಾಲಯ ಹೇಳಿದೆ.

ಭಾರತ ಮತ್ತು ವಿಯೇಟ್ನಾಮೀಸ್ ದಂಪತಿಗಳ ಮಗ, ಫ್ರಾನ್ಸ್ ಪೌರತ್ವ ಹೊಂದಿರುವ ಚಾರ್ಲ್ಸ್ ಶೋಭರಾಜ್ ನೇಪಾಳಕ್ಕೆ ನಕಲಿ ಪಾಸ್ ಪೋರ್ಟ್ ಬಳಸಿ ಪ್ರವೇಶಿಸಿದ್ದ. 1975ರಲ್ಲಿ ಈತ ಅಮೆರಿಕದ ಪ್ರಜೆಗಳಾದ ಕೋನಿ ಜೋ ಬೊರೊಜಿಂಚ್ (29)ಮತ್ತು ಆತನ ಗರ್ಲ್ ಫ್ರೆಂಡ್ ಕೆನಡಾ ಮೂಲದ ಲೌರೆಂಟ್ ಕಾರೆರ್ (26) ಅವರನ್ನು ಹತ್ಯೆ ಮಾಡಿದ್ದನು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!