ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………….
ಹೊಸದಿಗಂತ ಆನ್ ಲೈನ್ ಡೆಸ್ಕ್:
ತೀವ್ರವಲ್ಲದ ಕೊರೋನಾ ಪ್ರಕರಗಳಿಗೆ ಪದೇ ಪದೇ ಸಿಟಿ ಸ್ಕ್ಯಾನ್ ಮಾಡುವುದು ಒಳ್ಳೆಯದಲ್ಲ. ಇದರಿಂದ ಆರೋಗ್ಯಕ್ಕೆ ಹೆಚ್ಚಿನ ಕೆಡುಕು ಉಂಟಾಗುತ್ತದೆ ಎಂದು ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಕೊರೋನಾ ಪಾಸಿಟಿವ್ ಎಂದು ತಿಳಿದ ಕೂಡಲೇ ಜನರು ಸಿಟಿ ಸ್ಕ್ಯಾನ್ ಮಾಡಿಸಲು ಮುಂದಾಗುತ್ತಾರೆ. ಆದರೆ ಸಿಟಿ ಸ್ಕ್ಯಾನ್ನ ದುರ್ಬಳಕೆ ಮತ್ತು ಇದರಿಂದ ಬಯೋಮಾರ್ಕರ್ಗೆ ಹಾನಿಯಾಗುತ್ತದೆ ಎಂದು ಹೇಳಿದ್ದಾರೆ.
ಒಂದು ಸಿಟಿ ಸ್ಕ್ಯಾನ್ ಅಂದರೆ ಎದೆಗೆ ಮಾಡಿಸುವ 300-400 ಎಕ್ಸ್ ರೇ (Chest X-rays)ಗಳಿಗೆ ಸಮ. ಇದು ಯುವಜವರು ಪದೇ ಪದೇ ಸಿಟಿ ಸ್ಕ್ಯಾನ್ ಮಾಡಿಸಿಕೊಂಡರೆ ಕ್ಯಾನ್ಸರ್ಗೆ ಆಹ್ವಾನ ನೀಡಿದಂತೆ. ವಿಕಿರಣಗಳಿಗೆ ಪದೇ ಪದೇ ತೆರೆದುಕೊಳ್ಳುವುದರಿಂದ ಹಾನಿ ಸಂಭವಿಸುತ್ತದೆ. ಆಕ್ಸಿಜನ್ ಸ್ಯಾಚುರೇಷನ್ ನಾರ್ಮಲ್ ಆಗಿದ್ದು , ತೀವ್ರವಲ್ಲದ ಕೊವಿಡ್ ಆಗಿದ್ದರೆ ಸಿಟಿ ಸ್ಕ್ಯಾನ್ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.
ಅಧ್ಯಯನ ವರದಿಯೊಂದನ್ನು ಉಲ್ಲೇಖಿಸಿದ ಗುಲೇರಿಯಾ, ತೀವ್ರವಲ್ಲದ ಕೊರೋನಾ ಮತ್ತು ಲಕ್ಷಣಗಳಿಲ್ಲ ರೋಗ ಸಂದರ್ಭಗಳಲ್ಲಿ ಸಿಟಿ ಸ್ಕ್ಯಾನ್ ಮಾಡಿದರೆ ಪ್ಯಾಚೆಸ್ (ಶ್ವಾಸಕೋಶದಲ್ಲಿನ ಸೋಂಕಿನ ಗುರುತು) ಕಂಡು ಬರಬಹುದು. ಆದ್ರೆ ಚಿಕಿತ್ಸೆ ಇಲ್ಲದೆಯೂ ಅವು ತಾವಾಗಿಯೇ ಗುಣವಾಗುವ ಸಾಧ್ಯತೆ ಇದೆ. ಇಂದು ವೇಳೆ ಆಸ್ಪತ್ರೆಗೆ ದಾಖಲಾದಾಗ ಸಿಟಿ ಸ್ಕ್ಯಾನ್ಗಳನ್ನು ಮಾಡಬಹುದು ಎಂದು ಅವರು ಸಲಹೆ ನೀಡಿದರೆ, ಜನರಿಗೆ ಅನುಮಾನವಿದ್ದರೆ ಅವರು ಎದೆಯ ಎಕ್ಸ್ ರೇ ಮಾಡಿಸಬಹುದು ಎಂದರು.
ಒಂದು ರೋಗ ಅಥವಾ ಸ್ಥಿತಿಯ ಚಿಕಿತ್ಸೆಗೆ ದೇಹವು ಎಷ್ಟು ಚೆನ್ನಾಗಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೋಡಲು ಬಳಸುವ ಬಯೋಮಾರ್ಕರ್ಗಳ ಕುರಿತು ಮಾತನಾಡಿದ ಗುಲೇರಿಯಾ, ಒಬ್ಬ ವ್ಯಕ್ತಿಗೆ ತೀವ್ರವಲ್ಲದ ಕೊವಿಡ್ ಇದ್ದರೆ ರಕ್ತ ಪರೀಕ್ಷೆಗಳಿಗೆ ಹೋಗಬೇಕಾದ ಅಗತ್ಯವಿಲ್ಲ. ಸಿಪಿಸಿ ಅಥವಾ ಎಲ್ಡಿಹೆಚ್ ಇವು ಆತಂಕ ಸೃಷ್ಟಿಸುತ್ತವೆ. ಈ ಬಯೋಮಾರ್ಕರ್ಗಳು ತೀವ್ರ ಹಂತದ ಪ್ರತಿಕ್ರಿಯಾಕಾರಿಗಳಾಗಿದ್ದು ಅದು ನಿಮ್ಮ ದೇಹದಲ್ಲಿ ಉರಿಯೂತ ಹೆಚ್ಚು ಮಾಡುತ್ತವೆ. ಅಧಿಕ ಸ್ಟಿರಾಯ್ಡ್ ಸೇವನೆಯಿಂದ ವೈರಲ್ ನ್ಯುಮೋನಿಯಾಗೆ ಕಾರಣವಾಗಬಹುದು ಎಂದು ಗುಲೇರಿಯಾ ಎಚ್ಚರಿಸಿದ್ದಾರೆ.
ಕೆಲವು ರೋಗಿಗಳು ಆರಂಭದಲ್ಲಿ ಸ್ಟಿರಾಯ್ಡ್ಗಳನ್ನು ತೆಗೆದುಕೊಳ್ಳುತ್ತಾರೆ, ಇದು ವೈರಲ್ ದ್ವಿಗುಣವಾಗಿಸುತ್ತದೆ. ತೀವ್ರವಲ್ಲದ ಕೊವಿಡ್ ರೋಗವಾಗಿದ್ದರೆ ಹೆಚ್ಚಿನ ಪ್ರಮಾಣದ ಸ್ಟಿರಾಯ್ಡ್ ತೆಗೆದುಕೊಳ್ಳುವುದರಿಂದ ತೀವ್ರವಾದ ವೈರಲ್ ನ್ಯುಮೋನಿಯಾಕ್ಕೆ ಕಾರಣವಾಗಬಹುದು. ಸ್ಟಿರಾಯ್ಡ್ ಮಧ್ಯಮ ಹಂತದಲ್ಲಿ ಮತ್ತು ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು ಎಂದು ಗುಲೇರಿಯಾ ಸಲಹೆ ನೀಡಿದ್ದಾರೆ.