Sunday, August 14, 2022

Latest Posts

ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 119 ಜನರಿಗೆ ಕೋವಿಡ್ ಸೋಂಕು ದೃಢ

ಹೊಸ ದಿಗಂತ ವರದಿ, ಕಾಸರಗೋಡು:

ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 119 ಮಂದಿಗೆ ಕೊರೋನಾ ಪಾಸಿಟಿವ್ ಆಗಿದೆ. ಈ ಪೈಕಿ 92 ಜನರಿಗೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ಅಲ್ಲದೆ ಜಿಲ್ಲೆಯಲ್ಲಿ 140 ಮಂದಿ ಗುಣಮುಖರಾದರು. ಇದೇ ವೇಳೆ ಕೇರಳದಲ್ಲಿ 3671 ಜನರಿಗೆ ಕೋವಿಡ್ ವೈರಸ್ ದೃಢಪಟ್ಟಿದೆ. ಇದರಲ್ಲಿ 3317 ಮಂದಿಗೆ ಸಂಪರ್ಕದ ಮೂಲಕ ಸೋಂಕು ತಗಲಿದೆ. ರಾಜ್ಯದಲ್ಲಿ 4142 ಜನರು ಗುಣಮುಖರಾದರು.
ತೃಶೂರು ಜಿಲ್ಲೆಯಲ್ಲಿ 490, ಕಲ್ಲಿಕೋಟೆ 457, ಕೊಲ್ಲಂ 378, ಪತ್ತನಂತ್ತಿಟ್ಟ 333, ಎರ್ನಾಕುಳಂ 332, ಮಲಪ್ಪುರಂ 278, ಆಲಪ್ಪುಳ 272, ತಿರುವನಂತಪುರ 234, ಕೋಟ್ಟಾಯಂ 227, ಕಣ್ಣೂರು 177, ವಯನಾಡು 159, ಪಾಲಕ್ಕಾಡು 130, ಕಾಸರಗೋಡು 119, ಇಡುಕ್ಕಿ ಜಿಲ್ಲೆಯಲ್ಲಿ 85 ಜನರಿಗೆ ಕೋವಿಡ್ ಸೋಂಕು ದೃಢಗೊಂಡಿದೆ. ಈ ಮಧ್ಯೆ ಕೊರೋನಾ ವೈರಸ್ ಬಾಧಿಸಿ ಕೇರಳದಲ್ಲಿ ಶುಕ್ರವಾರ 14 ಮಂದಿ ಸಾವಿಗೀಡಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss