ಹೊಸ ದಿಗಂತ ವರದಿ, ಶಿವಮೊಗ್ಗ:
ಶಿವಮೊಗ್ಗ ಜಿಲ್ಲೆಯಲ್ಲಿ ಶುಕ್ರವಾರ ಕೊರೋನಾ ಸೋಂಕು ಶತಕ ದಾಟಿದ್ದು, ಸೋಂಕಿತ ಒಬ್ಬರು ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 353 ಏರಿಕೆಯಾಗಿದೆ.
147 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಗುಣಮುಖರಾದ 50 ಜನರನ್ನು ಬಿಡುಗಡೆ ಮಾಡಲಾಗಿದೆ.
ಶಿವಮೊಗ್ಗದಲ್ಲಿ 32, ಭದ್ರಾವತಿ 41, ಶಿಕಾರಿಪುರ 03, ತೀರ್ಥಹಳ್ಳಿ 17, ಸೊರಬ 01, ಸಾಗರ 23, ಹೊಸನಗರ 05 ಹಾಗೂ ಹೊರ ಜಿಲ್ಲೆಯ 02 ಪ್ರಕರಣ ದಾಖಲಾಗಿದ್ದು, ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳು 617 ಕ್ಕೆ ಏರಿಕೆಯಾಗಿದೆ. 2965 ಜನರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 115 ಜನ, ಖಾಸಗಿ ಆಸ್ಪತ್ರೆಯಲ್ಲಿ 88 ಜನ ಚಿಕಿತ್ಸೆ ಪಡೆಯುತ್ತಿದ್ದು,
397 ಜನ ಹೋಂ ಕ್ವಾರಂಟೈನ್ ನಲ್ಲಿದ್ದಾರೆ.