ಕರಾವಳಿಯಲ್ಲಿ ಸೌಹಾರ್ದ ಸಂದೇಶ: ಪ್ರವಾಹಕ್ಕೆ ಸಿಲುಕಿದ ಶರೀಫನನ್ನು ಜೀವದ ಹಂಗು ತೊರೆದು ರಕ್ಷಿಸಿದ ಸೋಮಶೇಖರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೋಮು ಸಂಘರ್ಷ ಹಣೆಪಟ್ಟಿ ಬಿಗಿದುಕೊಳ್ಳುವ ಕೆಲವು ಘಟನೆಗಳ ನಡುವೆಯೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದತೆಯ ಸಂದೇಶ ಸಾರುವ ಘಟನೆ ನಡೆದಿದೆ.

ಕಡಬ ತಾಲೂಕಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆಯಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಶರೀಫ್ ಎಂಬವರನ್ನು ಜೀವದ ಹಂಗು ತೊರೆದು ಸೋಮಶೇಖರ್ ಎಂಬವರು ರಕ್ಷಿಸಿ ದಡ ಸೇರಿಸಿದ್ದಾರೆ.

ಸುಬ್ರಹ್ಮಣ್ಯ ಸಮೀಪದ ಹರಿಹರ ಪಳ್ಳತ್ತಡ್ಕ ಎಂಬಲ್ಲಿ ಈ ಘಟನೆ ನಡೆದಿದ್ದು, ಪ್ರವಾಹದಲ್ಲಿ ಬಂದು ಸೇತುವೆ ಮೇಲೆ ಸಿಲುಕಿದ್ದ ಮರದ ದಿಮ್ಮಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸುವ ಸಂದರ್ಭ ಆಪರೇಟರ್ ಶರೀಫ್ ನಿಯಂತ್ರಣ ತಪ್ಪಿ ಪ್ರವಾಹದ ನೀರಿಗೆ ಬಿದ್ದಿದ್ದರು. ಇದನ್ನು ಕಂಡು ತಕ್ಷಣವೇ ನದಿಗೆ ಹಾರಿದ ಸೋಮಶೇಖರ್ ಎಂಬವರು ಅವರನ್ನು ರಕ್ಷಿಸಿದ್ದು, ಈ ಘಟನೆ ದಕ್ಷಿಣ ಕನ್ನಡದಲ್ಲಿ ಕೋಮು ಹೆಸರಿನಲ್ಲಿ ಅಶಾಂತಿ ಸೃಷ್ಟಿಸುವ ಯತ್ನಗಳ ನಡುವೆಯೂ ಸೌಹಾರ್ದತೆ ಇನ್ನೂ ಗಟ್ಟಿಯಾಗಿದೆ ಎಂಬ ಸಂದೇಶ ಸಾರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!