Saturday, July 2, 2022

Latest Posts

ಮೂವರು ಸ್ನೇಹಿತರ ನಡುವೆ ಜಗಳ: ಓರ್ವನಿಗೆ ಚಾಕು ಇರಿತ

ಹೊಸದಿಗಂತ ವರದಿ, ಹುಬ್ಬಳ್ಳಿ:

ಇಬ್ಬರು ಸ್ನೇಹಿತರು ಸೇರಿ ಮತ್ತೋರ್ವ ಸ್ನೇಹಿತನನ್ನು ಚಾಕುವಿನಿಂದ ಇರಿದ ಘಟನೆ ಜಿಲ್ಲೆಯ ಹೆಗ್ಗೇರಿಯಲ್ಲಿ ನಡೆದಿದೆ.
ಹಳೆ ಹುಬ್ಬಳ್ಳಿ ನಿವಾಸಿ ಆಸೀಫ್ ಗಾಯಗೊಂಡ ವ್ಯಕ್ತಿ. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾರುತಿ ನಗರದ ನಿವಾಸಿಯಾದ ರೆಹಮತ್ ಮತ್ತು ಗೌಸ್ ಚಾಕು ಇರಿದ ಆರೋಪಿಗಳು.
ಮೂವರು ಸ್ನೇಹಿತರು ಜೊತೆಯಲ್ಲಿದ್ದಾಗ ಜಗಳ ನಡೆದಿದೆ. ಈ ಬಗ್ಗೆ ಸೇಡು ತೀರಿಸಿಕೊಳ್ಳಲು ಇಬ್ಬರು ಸ್ನೇಹಿತರು ಸೇರಿ ಆಸೀಫ್‌ ಅವರ ಎದೆ, ಹೊಟ್ಟೆ ಭಾಗಕ್ಕೆ ಚಾಕು ಇರಿದಿದ್ದಾರೆ.
ಘಟನಾ ಸಂದರ್ಭದಲ್ಲಿ ಆರೋಪಿಗಳು ಗಾಂಜಾ ಸೇವನೆ ಮಾಡಿದ್ದರು ಎನ್ನುವ ಮಾಹಿತಿಯಿದೆ.
ಆರೋಪಿಗಳ ಬಂಧಿನಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss