ಹೆಡೆಯೆತ್ತಿದ ಕೋವಿಡ್‌ಗೆ ಡ್ರ್ಯಾಗನ್ ಕಂಗಾಲು: ಶಾಂಘೈ ಲಾಕ್‌ಡೌನ್‌ಗೆ ಜನರಿಂದಲೇ ವಿರೋಧ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚೀನಾದಲ್ಲಿ ಕೋವಿಡ್ ಮತ್ತೆ ಹೆಡೆಯೆತ್ತಿದ್ದು, ಇಲ್ಲಿನ ಅತೀ ದೊಡ್ಡ ನಗರ ಶಾಂಘೈನ ಸ್ಥಿತಿ ಚಿಂತಾಜನಕವಾಗಿದೆ.
ಬರೋಬ್ಬರಿ 2.6 ಕೋಟಿ ಜನಸಂಖ್ಯೆ ಹೊಂದಿರುವ ಶಾಂಘೈನಲ್ಲಿ ಕಳೆದ ವಾರದಿಂದಲೇ ಎರಡು ಹಂತದ ಲಾಕ್‌ಡೌನ್ ಜಾರಿಯಲ್ಲಿದೆ. ಜೊತೆಗೆ ಮನೆಯಿಂದ ಹೊರ ಬಾರದಂತೆಯೂ ನಿರ್ಬಂಧಿಸಲಾಗಿದೆ. ಇದರ ಪರಿಣಾಮ ಆಹಾರ, ಔಷಧಿ, ಆರೋಗ್ಯ ಸೇವೆಗಳು ಪೂರೈಕೆಯಾಗದೆ ಜನತೆ ಅಕ್ಷರಶಃ ನರಕಸದೃಶ ಸ್ಥಿತಿ ಎದುರಿಸುತ್ತಿದ್ದಾರೆ. ಇನ್ನು ಕೋವಿಡ್ ಪತ್ತೆಗಾಗಿ ಸ್ವಯಂ ಪರೀಕ್ಷೆಗೆ ಒಳಗಾಗುವ ಉಪಕರಣಗಳು, ಮಾಸ್ಕ್ ಸೇರಿದಂತೆ ಸೋಂಕು ತಡೆಗಟ್ಟಲು ಬೇಕಾದ ಅಗತ್ಯ ಮುನ್ನೆಚ್ಚರಿಕೆ ಸಾಧನಗಳು ಜನತೆಯನ್ನು ತಲುಪುತ್ತಿಲ್ಲ ಎಂಬ ದೂರುಗಳೂ ವ್ಯಾಪಕವಾಗಿ ಕೇಳಿಬರುತ್ತಿದೆ.
ಈ ನಡುವೆ ಚಿಕಾಗೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ಟ್ವೀಟ್ ಮಾಡಿದ್ದು, ಲಾಕ್‌ಡೌನ್‌ಗೆ ಶಾಂಘೈ ಜನರಿಂದ ಪ್ರತಿರೋಧ ವ್ಯಕ್ತವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!