Thursday, July 7, 2022

Latest Posts

ಬಂಧಿತ ಚೀನೀ ಗೂಢಾಚಾರಿಯಿಂದ 1300 ಭಾರತೀಯ ಸಿಮ್‌ಗಳ ವಶ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪಶ್ಚಿಮ ಬಂಗಾಳದ ಮಾಲ್ಡಾ ಬಳಿಯಲ್ಲಿನ ಗಡಿಯಲ್ಲಿ ಗಡಿಬದ್ರತಾ ಪಡೆ ಬಂಧಿಸಿದ ಚೀನಾದ ಪ್ರಜೆ ಚೀನಿ ಗೂಢಾಚಾರಿಯಾಗಿದ್ದು, ಈತನ ವಶದಿಂದ 1300 ಕ್ಕೂ ಹೆಚ್ಚು ಭಾರತೀಯ ಸಿಮ್‌ಕಾರ್ಡ್‌ಗಳನ್ನು ವಶಪಡಿಸಿಕೊಂಡಿರುವ ಆಘಾತಕಾರಿ ಅಂಶವೀಗ ಬೆಳಕಿಗೆ ಬಂದಿದೆ.
ಈತನನ್ನು ಮಾಲ್ಡಾದ ಸುಲ್ತಾನಪುರ ಇಂಡೋ-ಬಾಂಗ್ಲಾ ಗಡಿಯಲ್ಲಿ ಗುರುವಾರ ಭಾರತೀಯ ಭೂ ಪ್ರದೇಶಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಬಂತನಾಗಿರುವ ಚೀನೀ ಪ್ರಜೆ ಹಾನ್ ಜುನ್ವೇಯಿಂದ ಹಲವು ಸೋಟಕ ಮಾಹಿತಿಗಳು ಬಹಿರಂಗಗೊಂಡಿವೆ. ತೀವ್ರ ವಿಚಾರಣೆಯ ಬಳಿಕ ನಕಲಿ ದಾಖಲೆಗಳ ಮೂಲಕ ಸಂಗ್ರಹಿಸಿದ 1300 ಕ್ಕೂ ಹೆಚ್ಚು ಭಾರತೀಯ ಸಿಮ್‌ಗಳನ್ನು ಈತ ತನ್ನ ಒಳ ಉಡುಪುಗಳಲ್ಲಿ ಅಡಗಿಸಿ ಕಳ್ಳಸಾಗಣೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ.
ಕಳ್ಳಸಾಗಣೆ ಮಾಡಿದ ಸಿಮ್‌ಗಳನ್ನು ನಂತರ ಚೀನಾದಲ್ಲಿ ಭಾರತೀಯ ಖಾತೆಗಳನ್ನು ಹ್ಯಾಕ್ ಮಾಡಲು ಮತ್ತು ಭಾರತದಲ್ಲಿ ಇತರ ಆರ್ಥಿಕ ವಂಚನೆಗಳನ್ನು ಮಾಡಲು ಬಳಸಲಾಗುತ್ತಿತ್ತು ಎಂದು ಈತ ಬಾಯ್ಬಿಟ್ಟಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss