Friday, July 1, 2022

Latest Posts

ವಿಮಾನದಲ್ಲಿ ಬೇರೆ ದೇಶಕ್ಕೆ ತೆರಳಿದವರ ಜೊತೆ ಉಗ್ರರೂ ಇರಬಹುದು: ಅಮೆರಿಕ ಶಂಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಅಫ್ಘಾನಿಸ್ತಾನದಿಂದ ಹಲವು ದೇಶಗಳಿಗೆ ಆ ದೇಶದ ನಾಗರಿಕರು ಹಾಗೂ ಆಫ್ಘನ್ ನಿರಾಶ್ರಿತರು ತೆರಳಿದ್ದಾರೆ.
ಈ ಸಂದರ್ಭದ ಉಪಯೋಗ ಪಡೆದು ಉಗ್ರರು ಯೂರೋಪ್ ದೇಶಗಳು ಹಾಗೂ ಅಮೆರಿಕಕ್ಕೆ ತೆರಳಿರುವ ಸಾಧ್ಯತೆ ಇದೆ ಎಂದು ಪೆಂಟಗನ್ ಮೂಲಗಳು ಕಳವಳ ವ್ಯಕ್ತಪಡಿಸಿವೆ.
ಉಗ್ರರು ಪರಿಸ್ಥಿತಿಯನ್ನು ಅವಲೋಕಿಸಿ, ಆಫ್ಘನ್ ಮುಗ್ಧ ಜನರನ್ನು ಬಳಸಿಕೊಂಡು ಬೇರೆ ದೇಶಗಳಿಗೂ ತೆರಳಿರಬಹುದು. ಈ ಬಗ್ಗೆ ಅಮೆರಿಕ ಸರ್ಕಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಅಫ್ಘಾನಿಸ್ತಾನದಿಂದ ಹೊರಬಂದವರಲ್ಲಿ ಕನಿಷ್ಠ ನೂರು ಮಂದಿಗೆ ಐಸಿಸ್ ಉಗ್ರರ ಸಂಘಟನೆ ಜೊತೆ ನಂಟಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಅನುಮಾನದ ಮೇರೆಗೆ ಎಲ್ಲೆಡೆ ಕಣ್ಗಾವಲಿರಿಸಲಾಗಿದೆ ಎಂದು ಪೆಂಟಗನ್ ಹೇಳಿಕೆ ಆಧರಿಸಿ ಪಾಶ್ಚಾತ್ಯ ದೇಶಗಳ ಮಾಧ್ಯಮಗಳು ವರದಿ ಮಾಡಿವೆ.
ಈ ಬಗ್ಗೆ ಅಮೆರಿಕ ಎಚ್ಚೆತ್ತುಕೊಂಡಿದ್ದು, ಅಫ್ಘಾನ್‌ನಿಂದ ಬರುವ ವಿಮಾನಗಳನ್ನು ಮೊದಲು ಕತಾರ್‌ನ ಅಲ್ ಉದೈದ್ ವಾಯುನೆಲೆ ಮತ್ತು ನ್ಯಾಟೋ ರಾಷ್ಟ್ರಗಳ ವಾಯುನೆಲೆಯಲ್ಲಿ ನಿಲ್ಲಿಸಲು ಮುಂದಾಗಿವೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss