Wednesday, July 6, 2022

Latest Posts

ಅಫ್ಘಾನ್ ನಿಂದ ಇಂದು ಭಾರತಕ್ಕೆ ಬಂದ 146 ಮಂದಿಯಲ್ಲಿ ಇಬ್ಬರಿಗೆ ಕೊರೋನಾ ಪಾಸಿಟಿವ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅಫ್ಘಾನಿಸ್ತಾನದಲ್ಲಿರುವ ಭಾರತೀಯರನ್ನು ವಾಪಸ್​ ದೇಶಕ್ಕೆ ತರುವ ಕಾರ್ಯ ಭರದಿಂದ ಸಾಗುತ್ತಿದೆ. ದಿನಕ್ಕೆ ಎರಡು ವಿಮಾನಗಳು ಕಾಬೂಲ್​ ಏರ್​ಪೋರ್ಟ್ ನಿಂದ ಹೊರಟು ಭಾರತ ತಲುಪುತ್ತಿದ್ದು, ಆದರೀಗ ಈ ಸ್ಥಳಾಂತರದ ಮಧ್ಯೆ ಕೊರೋನಾ ಆತಂಕ ಶುರುವಾಗಿದೆ.
ಇಂದು ಬೆಳಗ್ಗೆ ಅಫ್ಘಾನ್ ನಿಂದ ದೆಹಲಿಗೆ ಬಂದ 146 ಭಾರತೀಯ ಪ್ರಯಾಣಿಕರಲ್ಲಿ, ಇಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಅವರನ್ನು ಎಲ್​ಎನ್​ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ರಾಜೇಂದ್ರ ಕುಮಾರ್​ ತಿಳಿಸಿದ್ದಾರೆ.
ಇಂದು ದೆಹಲಿಗೆ ಬಂದು ಇಳಿದಿದ್ದು 146 ಜನರ ಎರಡನೇ ಬ್ಯಾಚ್ ಆಗಿದೆ. ಇಷ್ಟೂ ಜನ ಸ್ವಲ್ಪ ದಿನಗಳ ಹಿಂದೆ ಯುಎಸ್​ ಮತ್ತು ಉತ್ತರ ಅಟ್ಲಾಂಟಿಕ ಒಪ್ಪಂದ ಸಂಸ್ಥೆಗಳ (NATO) ಯುದ್ಧ ವಿಮಾನದ ಮೂಲಕ ಕಾಬೂಲ್​ನಿಂದ ದೋಹಾಕ್ಕೆ ಹೋಗಿದ್ದರು. ಅಲ್ಲಿಂದ ನಾಲ್ಕು ವಿವಿಧ ವಿಮಾನಗಳ ಮೂಲಕ ದೆಹಲಿಗೆ ಬಂದಿಳಿದಿದ್ದಾರೆ. ಹಾಗೇ, ಭಾನುವಾರ ಸುಮಾರು 400 ಜನರನ್ನು ವಿವಿಧ ವಿಮಾನಗಳ ಮೂಲಕ ಅಪ್ಘಾನ್​ನಿಂದ ಭಾರತಕ್ಕೆ ಕರೆತರಲಾಗಿದೆ. ಅದರಲ್ಲಿ 329 ಮಂದಿ ಭಾರತೀಯರೇ ಆಗಿದ್ದಾರೆ. ಅಫ್ಘಾನ್​ನಲ್ಲಿರುವ ಹಿಂದು ಮತ್ತು ಸಿಖ್​ ಸಮುದಾಯದವರನ್ನೂ ಭಾರತಕ್ಕೆ ಕರೆತರಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss