ಹೊಸದಿಗಂತ ಆನ್ ಲೈನ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಏಪ್ರಿಲ್ 19ರಿಂದ ಏಪ್ರಿಲ್ 24ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಮುಂದಿನ ವಾರ ಖೋಡೇಸ್, ಸಾರಕ್ಕಿ, ಎಲಿಟಾ, ಆರ್ಬಿಐ ಸಬ್ ಸ್ಟೇಷನ್ ಅಡಿಯಲ್ಲಿ ಬರುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿರುವುದಾಗಿ ಬೆಸ್ಕಾಂ ಮಾಹಿತಿ ನೀಡಿದೆ.
ಕೋಣನಕುಂಟೆ, ಪುಟ್ಟೇನಹಳ್ಳಿ, ಜೆಪಿ ನಗರ ವ್ಯಾಪ್ತಿಯಲ್ಲಿ ಕೇಬಲ್ ಹಾಗೂ ಮೂಲಸೌಲಭ್ಯ ಕಾಮಗಾರಿಗಳು ನಡೆಯುವ ಕಾರಣ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೂ ಮುಂದಿನ ವಾರವಿಡೀ ವಿದ್ಯುತ್ ವ್ಯತ್ಯಯವಾಗುವುದಾಗಿ ತಿಳಿಸಿದೆ.
ಆರ್ಬಿಐ ಲೇಔಟ್, ಶ್ರೀನಿಧಿ ಲೇಔಟ್, ಜೆಪಿ ನಗರ ಆರನೇ ಹಂತ, ಸಾರಕ್ಕಿ ತೋಟ, ರೋಸ್ ಗಾರ್ಡನ್ ಸಿಂಧೂರ್ ಕಲ್ಯಾಣ ಮಂಟಪದ ಸಮೀಪ ಹಾಗೂ ಸಿದ್ದೇಶ್ವರ ಥಿಯೇಟರ್ ಸುತ್ತಮುತ್ತ ಏಪ್ರಿಲ್ 19ರಿಂದ ಏಪ್ರಿಲ್ 22ರವರೆಗೂ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರಕ್ಕಿ ಕೆರೆ, ಆಂಥೋನಿ ಕೈಗಾರಿಕಾ ಪ್ರದೇಶ, ಸಿಎಸ್ ಶಾಲೆ ರಸ್ತೆ, ರಾಜೀವ್ ಗಾಂಧಿ ರಸ್ತೆ, ಚುಂಚಘಟ್ಟ ಮುಖ್ಯ ರಸ್ತೆ ಹಾಗೂ ಗಣಪತಿಪುರದಲ್ಲಿ ಏಪ್ರಿಲ್ 20ರವರೆಗೂ ವಿದ್ಯುತ್ ವ್ಯತ್ಯಯವಾಗಲಿದೆ. ತಿಪ್ಪಸಂದ್ರ, ಆರ್ಬಿಎಲ್ ಲೇಔಟ್, ಬಿಸಿಎಂಸಿ ಲೇಔಟ್, ಚನ್ನಮ್ಮ ಗಾರ್ಡನ್ ಪ್ರದೇಶಗಳಲ್ಲಿ ಏಪ್ರಿಲ್ 21 ಹಾಗೂ ಏಪ್ರಿಲ್ 23ರಂದು ವಿದ್ಯುತ್ ವ್ಯತ್ಯಯವಾಗಲಿದೆ.
ಕೇಬಲ್ ಕಾಮಗಾರಿ ಕಾರಣ ಏಪ್ರಿಲ್ 20ರಂದು ಬೆಳಿಗ್ಗೆ 10 ರಿಂದ ಸಂಜೆ 6.30ರವರೆಗೆ ಜೆಪಿ ನಗರ ಐದನೇ ಹಂತ, ವಿನಾಯಕ ನಗರ, ನಂಜುಂಡೇಶ್ವರ ಲೇಔಟ್ನಲ್ಲಿ ಹಾಗೂ ಏಪ್ರಿಲ್ 22ರಂದು ಪಾಂಡುರಂಗ ನಗರದ ಸುತ್ತಮುತ್ತ ಹಾಗೂ ಬಿಜೆ ರಸ್ತೆಯಲ್ಲಿ, ಏಪ್ರಿಲ್ 23 ಹಾಗೂ ಏಪ್ರಿಲ್ 24ರಂದು ಜೆಪಿ ನಗರ 5ನೇ ಹಂತ, ವಿನಾಯಕ ನಗರ, ನಂಜುಂಡೇಶ್ವರ ಲೇಔಟ್ ಹಾಗೂ ಎಸ್ಟೀಮ್ ಪಾರ್ಕ್ ರೋಡ್ನಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.