Wednesday, August 17, 2022

Latest Posts

ಕನ್ನಡ ಬಿಗ್​ಬಾಸ್ ಮನೆಯಿಂದ ಮೊದಲ ಸ್ಪರ್ಧಿ ಔಟ್!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕನ್ನಡ ಬಿಗ್​ಬಾಸ್ ಸೀಸನ್ 8 ರ ಮೊದಲ ಎಲಿಮಿನೇಟರ್​ ಆಗಿ ಟಿಕ್ ಟಾಕ್ ಸ್ಟಾರ್ ಧನುಶ್ರೀ ಮನೆಯಿಂದ ಹೊರ‌ಬಂದಿದ್ದಾರೆ.
ಮೊದಲ ಸ್ಪರ್ಧಿಯಾಗಿ ಎಂಟ್ರಿ‌ಕೊಟ್ಟಿದ್ದ ಧನುಶ್ರೀ ಮೊದಲು ಎಲಿಮಿನೇಟ್​​ ಆಗಿ​ದ್ದಾರೆ. ಕಳೆದ ಒಂದು‌ವಾರ ಬಿಗ್‌ಬಾಸ್ ಮನೆಯಲ್ಲಿ ಯಾವುದೇ ಪರ್ಫಾರ್ಮೆನ್ಸ್ ತೋರದ ಧನುಶ್ರೀ ಕಳಪೆ ಪ್ರದರ್ಶನ ತೋರಿದ್ದರು. ನಾಮಿನೇಷನ್​ನಿಂದ ತಪ್ಪಿಸಿಕೊಳ್ಳಲು ಎರಡು ಬಾರಿ ಅವಕಾಶ ಸಿಕ್ಕರೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಅವರ ಸೋಲನ್ನು ಮನೆಯ ಎಲ್ಲ ಸದಸ್ಯರೂ ಒಪ್ಪಿಕೊಂಡರು. ಜೊತೆಗೆ ಎಲ್ಲರು ಧನುಶ್ರೀಗೆ ‘ಕಳಪೆ’ ಎಂಬ ಹಣೆಪಟ್ಟಿ ಕಟ್ಟಿದರು. ಪರಿಣಾಮವಾಗಿ ಅವರನ್ನು ಜೈಲಿಗೂ ಕಳಿಸಲಾಗಿತ್ತು.
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟಿಕ್‌ಟಾಕ್ ಮೂಲಕ ರಾತ್ರೋರಾತ್ರಿ ಸ್ಟಾರ್ ಆಗಿದ್ದ ಈಕೆ, ಮನೆಯಲ್ಲಿ ಒಂದು ದಿನವೂ ಮನರಂಜನೆ ನೀಡಲಿಲ್ಲ.ಈ ಹಿನ್ನೆಲೆ ಮನರಂಜನೆ ನೀಡದೆ ನೀರಸವಾದ ಧನುಶ್ರೀ ಕಳಪೆಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು ಮನೆಯಿಂದ ಹೊರಬರಬೇಕಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!