Wednesday, August 10, 2022

Latest Posts

ಕೋವಿಡ್‌ನಿಂದ ತತ್ತರಿಸಿದ ಜಪಾನ್: ಆಸ್ಪತ್ರೆಗಳು ಭರ್ತಿ, ಹೆಚ್ಚುತ್ತಿವೆ ಸಾವಿನ ಸಂಖ್ಯೆಗಳು!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್ :

ಜಪಾನ್‌ನಲ್ಲಿ ಕೊರೋನಾ ಪಿಡುಗಿನ ನಾಲ್ಕನೇ ಅಲೆಯಲ್ಲಿ ಆಸ್ಪತ್ರೆ ಸಂಪನ್ಮೂಲಗಳು ವಸ್ತುಶಃ ಕುಸಿತ ಕಂಡಿದ್ದು, ಇದರಿಂದ ರೂಪಾಂತರಿ ಕೊರೋನಾ ವೈರಾಣು ಸೋಂಕು ಭಾರೀ ಪ್ರಮಾಣದಲ್ಲಿ ಹರಡುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆಯಿಂದ ಜನರು ಮನೆಗಳಲ್ಲೇ ಉಳಿದುಕೊಂಡಿದ್ದು, ಮನೆಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ ಎಂಬುದಾಗಿ ರಾಯಿಟರ್ಸ್ ವರದಿ ಮಾಡಿದೆ. ಈ ನಡುವೆ ಜಪಾನ್ ಕೊರೋನಾ ಸೋಂಕು ನಿಯಂತ್ರಿಸಲು ಘೋಷಿಸಿದ್ದ ತುರ್ತು ಪರಿಸ್ಥಿತಿಯನ್ನು ಕಳೆದ ವಾರ ಮೇ 31ರವರೆಗೆ ವಿಸ್ತರಿಸಿ ನಿರ್ಬಂಧಗಳನ್ನು ಇನ್ನಷ್ಟು ಕಠಿಣಗೊಳಿಸಿದೆ.
ಇನ್ನು ಕೇವಲ 10ವಾರಗಳಲ್ಲಿ ಒಲಿಂಪಿಕ್ ಗೇಮ್ಸ್ ಆರಂಭಗೊಳ್ಳಲಿದ್ದು, ಹೆಚ್ಚುತ್ತಿರುವ ಸೋಂಕಿನ ಸಂಖ್ಯೆಗಳಿಗೆ ಹೋಲಿಸಿದರೆ ಆಸ್ಪತ್ರೆಗಳಲ್ಲಿರುವ ಬೆಡ್‌ಗಳ ಸಂಖ್ಯೆ ತೀರಾ ಕಡಿಮೆಯಾಗಿದೆ ಎಂಬುದಾಗಿ ಒಸಾಕ ಸಿಟಿ ಯುನಿರ್ವಸಿಟಿಯ ಗ್ರಾಜುಯೇಟ್ ಸ್ಕೂಲ್ ಆಫ್ ಮೆಡಿಸಿನ್‌ನ ಪ್ರೊಫೆಸರ್‌ಆಗಿರುವ ಯಸುತೋಷಿ ಕಿಡೊ ಹೇಳುತ್ತಾರೆ.
ಒಸಾಕವೊಂದರಲ್ಲೇ ಮನೆಯಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 18ಕ್ಕೇರಿದ್ದು, ಆಸ್ಪತ್ರೆಯ ಹೊರಗಡೆ ಸಂಭವಿಸಿದ ಸಾವುಗಳ ಬಗ್ಗೆ ಇದೇ ಮೊದಲ ಬಾರಿಗೆ ವರದಿ ಬಹಿರಂಗವಾಗುತ್ತಿದೆ. ಸೋಂಕಿಗೆ ಬಲಿಯಾದ ಈ 18ಮಂದಿಯನ್ನು ಯಾಕೆ ಆಸ್ಪತ್ರೆಗೆ ದಾಖಲಿಸಲಿಲ್ಲ ಎಂಬುದಕ್ಕೆ ಅಲ್ಲಿನ ಅಕಾರಿಗಳು ಸೂಕ್ತ ಉತ್ತರ ನೀಡಿಲ್ಲ. ಆದರೆ ಅಲ್ಲಿನ ಆಸ್ಪತ್ರೆಗಳಲ್ಲಿನ ಶೇ.96ಕ್ಕೂ ಹೆಚ್ಚಿನ ಬೆಡ್‌ಗಳು ಭರ್ತಿಯಾಗಿವೆ ಎಂಬ ವರದಿಗಳ ನಡುವೆಯೇ ಈ ಸಾವು ಸಂಭವಿಸಿದೆ ಎಂಬುದಾಗಿ ವರದಿ ಬೊಟ್ಟು ಮಾಡಿದೆ.
ಒಸಾಕಾದ ಆಸ್ಪತ್ರೆಗಳು ಕೋವಿಡ್ -19 ಪ್ರಕರಣಗಳಿಂದ ತುಂಬಿ ಕ್ಯಾನ್ಸರ್ ಮತ್ತು ಹೃದಯ ಕಾಯಿಲೆ ಪೀಡಿತರಿಗೆ ಅವಕಾಶ ಇಲ್ಲದಂತಾಗಿದೆ.ಆಸ್ಪತ್ರೆಗಳಲ್ಲಿ ಇವರಿಗೆ ವ್ಯವಸ್ಥೆ ಕಲ್ಪಿಸಲಾಗದ ದುಸ್ಥಿತಿಗೆ ಅಲ್ಲಿನ ಆಸ್ಪತ್ರೆಗಳು ತಲುಪಿವೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ ಒಸಾಕಾದ ಗವರ್ನರ್ ಹಿರೊಫ್ಯುಮಿ ಯೊಶಿಮುರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆಯಿಂದಾಗಿಯೇ ಮನೆಗಳಲ್ಲಿ ಈ ಸಾವು ಸಂಭವಿಸಿವೆ. ಈಗ ಮನೆಗಳಲ್ಲಿನ ಈ ಸೋಂಕಿತರಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಮೆಡಿಕಲ್ ಅಸೋಸಿಯೇಶನ್‌ಗೆ ಸೂಚಿಸಲಾಗಿದೆ ಎಂದರು.

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss