Wednesday, August 17, 2022

Latest Posts

ಜುಲೈ 18 ರಿಂದ ಭಾರತ- ಲಂಕಾ ಕ್ರಿಕೆಟ್ ಸರಣಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
 
ಹೊಸ ದಿಗಂತ ಆನ್ ಲೈನ್ ಡೆಸ್ಕ್

ಶ್ರೀಲಂಕಾ ತಂಡದ ಸಿಬ್ಬಂದಿಗಳಿಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಕ್ರಿಕೆಟ್ ಸರಣಿಯ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಅದರಂತೆ ಜುಲೈ 13ರಂದು ಆರಂಭಗೊಳ್ಳಬೇಕಿದ್ದ ಏಕದಿನ ಸರಣಿಯನ್ನು ಜುಲೈ 18ರಿಂದ ಆರಂಭಿಸಲು ನಿರ್ಧರಿಸಲಾಗಿದೆ.
ಅದರಂತೆ ಮೊದಲ ಏಕದಿನ ಪಂದ್ಯವು ಜುಲೈ 18ರಂದು , ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳು ಕ್ರಮವಾಗಿ ಜುಲೈ 20 ಮತ್ತು 23ರಂದು ನಡೆಯಲಿವೆ.
ಲಂಕಾ ತಂಡದ ಬ್ಯಾಟಿಂಗ್ ಕೋಚ್ ಗ್ರಾಂಟ್ ಫ್ಲವರ್ ಮತ್ತು ತಂಡದ ಡಾಟಾ ವಿಶ್ಲೇಷಣೆಕಾರ ನಿರೋಶನ್ ಎಂಬವರಿಗೆ ಕೊರೋನಾ ಸೋಂಕು ದೃಢಪಟ್ಟುದರಿಂದ ಲಂಕಾ ಮಂಡಳಿಯು ತಂಡದ ಕ್ವಾರಂಟೈನ್ ಅವಧಿಯನ್ನು ವಿಸ್ತರಿಸಲು ನಿರ್ಧರಿಸಿದ್ದರಿಂದ ಈ ವೇಳಾಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ಇವರಿಬ್ಬರು ಇಂಗ್ಲೆಂಡ್‌ನಿಂದ ಮರಳಿದ ಬಳಿಕ ಕೊರೋನಾ ಸೋಂಕು ದೃಢಪಟ್ಟಿತ್ತು.
ಒಂದು ವೇಳೆ ಇಂಗ್ಲೆಂಡಿನಿಂದ ಮರಳಿದ ಕ್ರಿಕೆಟ್ ತಂಡದ ಆಟಗಾರರಿಗೆ ಕೂಡ ಕೊರೋನಾ ಸೋಂಕು ತಗಲಿದರೆ ಲಂಕಾ ಮಂಡಳಿಯು ಬೇರೆಯೆ ತಂಡವನ್ನು ರಚಿಸಬೇಕಾಗುವ ಸಾಧ್ಯತೆಯಿದೆ. ಈಗಾಗಲೆ ಲಂಕಾ ತಂಡವು ಎರಡು ತಂಡಗಳನ್ನು ಪ್ರತ್ಯೇಕವಾಗಿ ಬಯೋಬಬಲ್‌ನಲ್ಲಿ ಇರಿಸಿದೆ. ಅಲ್ಲಿಯೂ ಒಬ್ಬ ಆಟಗಾರನಿಗೆ ಕೊರೋನಾ ಪಾಸಿಟಿವ್ ಬಂದಿರುವುದಾಗಿ ವರದಿಗಳು ತಿಳಿಸಿವೆ.
ಪ್ರಸ್ತುತ ಲಂಕಾ ಕ್ರಿಕೆಟಿಗರಿಗೆ ಭಾನುವಾರ ತನಕ ಕ್ವಾರಂಟೈನ್ ಇದ್ದು, ಭಾನುವಾರ ಮತ್ತೊಮ್ಮೆ ಅವರ ವೈದ್ಯಕೀಯ ಪರೀಕ್ಷೆ ನಡೆಯಲಿದೆ.
ಗ್ರಾಂಟ್ ಫ್ಲವರ್‌ಗೆ ಡೆಲ್ಟಾ ವೈರಸ್ ತಗಲಿದೆ ಎಂಬುದಾಗಿ ಕೆಲವು ಮೂಲಗಳು ಹೇಳುತ್ತಿವೆ. ಲಂಕಾ ಕ್ರಿಕೆಟ್ ಮಂಡಳಿ ಇದನ್ನು ದೃಢಪಡಿಸಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!