spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮುಡಾದಿಂದ 300 ಸಿಎ ನಿವೇಶನಗಳ ಹಂಚಲು ನಿರ್ಧಾರ: ಹೆಚ್.ವಿ. ರಾಜೀವ್

- Advertisement -Nitte

ಹೊಸ ದಿಗಂತ ವರದಿ, ಮೈಸೂರು:

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 300 ಸಿಎ ನಿವೇಶಗಳನ್ನು ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ ರಾಜೀವ್ ತಿಳಿಸಿದರು.
ಶನಿವಾರ ಮುಡಾ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 300 ಸಿಎ ನಿವೇಶನ ಹಂಚುವ ಬಗ್ಗೆ
ಸಾರ್ವಜನಿಕರಗೆ ಮಾಹಿತಿ ನೀಡಲಾಗುತ್ತಿದೆ. ಅರ್ಹ ಸಂಘ, ಸಂಸ್ಥೆಗಳು ಅರ್ಜಿಗಳನ್ನು ಪ್ರಾಧಿಕಾರದಲ್ಲಿ ಸೆಪ್ಟಂಬರ್ 23 ರಿಂದ ಪಡೆದು, ಸಂಬAಧಿಸಿದ ದಾಖಲೆಗಳೊಂದಿಗೆ ಅ.30 ರೊಳಗೆ ಸಲ್ಲಿಸಿ ಸ್ವೀಕೃತಿ ಪಡೆಯಬೇಕು ಎಂದು ತಿಳಿಸಿದರು. ಈ ಹಿಂದೆ ನಾಗರಿಕ ಸೌಕರ್ಯ ನಿವೇಶನ ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಹೊಸ ಮಂಜೂರಾತಿಗೆ ಪರಿಗಣಿಸಲಾಗುವುದಿಲ್ಲ. ಸಂಸ್ಥೆಯ ಆರ್ಥಿಕ ಸ್ಥಿತಿ, ಸಂಸ್ಥೆಯ ಚಟುವಟಿಕೆಗಳು, ಸಾರ್ವಜನಿಕರ ಹಿತಕಾಗಿ ಸಲ್ಲಿಸಿರುವ ಸೇವೆಯನ್ನು ಮಂಜೂರಾತಿ ಸಮಯದಲ್ಲಿ ಉಪಸಮಿತಿ ಪರಿಶೀಲನೆ ನಡೆಸಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ, ವಿಶೇಷ ಚೇತನ ಶ್ರೇಯೋಭಿವೃದ್ಧಿ ಸೇವೆಯ ಆಧಾರದ ಮೇಲೆ ಮೀಸಲಾತಿ ನೀಡಲಾಗುವುದು. ಜೊತೆಗೆ ರಿಯಾಯಿತಿ ನೀಡಲಾಗುವುದು. ಮಂಜೂರಾತಿ ಪತ್ರ ಪಡೆದ ನಂತರ ನಿವೇಶನ ಪಡೆದ ಸಂಸ್ಥೆ ಮೂಡಾದ ಷರತ್ತುಗಳನ್ನು ಪಾಲಿಸಬೇಕು. ನಿಯಮ ಪಾಲಿಸದ 188 ಸಿಎ ನಿವೇಶನಗಳನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದರು.
ಗುಂಪು ವಸತಿ ಯೋಜನೆಗೆ ಸಮೀಕ್ಷೆ ಆರಂಭಿಸಲಾಗಿದೆ. ವಸತಿ ರಹಿತರು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು. ಸಾರ್ವಜನಿಕರು ಸಮೀಕ್ಷೆಯಲ್ಲಿ ನೀಡುವ ಮಾಹಿತಿ ಆಧರಿಸಿ ಎರಡನೇ ಹಂತದ ಯೋಜನೆ ರೂಪಿಸಲಾಗುವುದು. ಕಡಿಮೆ ಮತ್ತು ಮಧ್ಯಮ ವರ್ಗದ ಜನರು ವಾಸಿಸುವ ಬಡಾವಣೆಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್, ಸದಸ್ಯರಾದ ನವೀನ್, ಲಿಂಗಣ್ಣ ಮತ್ತಿತರರು ಉಪಸ್ಥಿತರಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss