Sunday, June 26, 2022

Latest Posts

70 ವರ್ಷದಿಂದ ಕಾಂಗ್ರೆಸ್ ಪಕ್ಷ, ಹಿಂದುಳಿದವರ ಬಳಕೆ ಬಿಟ್ಟರೆ, ಸಾಧನೆ ಏನೂ ಇಲ್ಲ: ಸಚಿವ ಈಶ್ವರಪ್ಪ

ಹೊಸ ದಿಗಂತ ವರದಿ, ಕಲಬುರಗಿ:

ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ಪಕ್ಷವು, ದಲಿತರ,ಹಿಂದೂಳಿದ ವಗ೯ಗಳ ಬಳಕೆ ಮಾಡಿಕೊಳ್ಳುವುದನ್ನು ಬಿಟ್ಟರೆ,ಅವರ ಅಭಿವೃದ್ಧಿಗಾಗಿ ಕಿಂಚಿತ್ತೂ ಕಾಳಜಿ ತೋರಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಅವರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಲಬುರಗಿ, ಬೀದರ,ಯಾದಗಿರಿ ವಿಭಾಗ ಮಟ್ಟದ ಹಿಂದೂಳಿದ ವಗ೯ಗಳ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಹುಡುಕಿದರು, ಸಿಗಲಾರದ ಹಾಗೇ ಪರಿಸ್ಥಿತಿ ನಿರ್ಮಾಣವಾಗಿದೆ. ತ್ರೀಪುರಾದಲ್ಲಿ ಪೂರ್ಣ ಪ್ರಮಾಣದಲ್ಲಿ ನೆಲಕಚ್ಚಿಕೊಂಡ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಹೋಗಿದೆ ಎಂದರು. ತ್ರೀಪುರಾದಲ್ಲಿ ಬಿಜೆಪಿ ಪಕ್ಷವು 329 ಸ್ಥಾನಗಳನ್ನು ಗೆದ್ದಿದ್ದು, ಡಿ.ಕೆ.ಶಿವಕುಮಾರ್ ಅವರ ಕನಸಿನಲ್ಲಿ ಬರುತ್ತಿದೆ ಎಂದರು.

ದಲಿತರು ಬಿಜೆಪಿ ಗೆ ಹೊಟ್ಟೆ ಪಾಡಿಗೆ ಬರುತ್ತಾರೆ ಎಂದು ಸಿದ್ದರಾಮಯ್ಯ ನವರು ಹೇಳುತ್ತಿದ್ದಾರೆ. ನಾನು ಪ್ರಶ್ನೆ ಮಾಡುತ್ತೆನೆ ಸಿದ್ದರಾಮಯ್ಯ ನವರೇ, ದಲಿತರ ಬಗ್ಗೆ ಇಷ್ಟೊಂದು ಹಗುರವಾಗಿ ಮಾತನಾಡುವ ತಮಗೆ, 70 ವಷ೯ಗಳಿಂದ ತಮಗೆ ದಲಿತರ ಅಭಿವೃದ್ಧಿ ಬಗ್ಗೆ ನೆನಪಾಗಲಿಲ್ಲ, ಮುಂಬರುವ ದಿನಗಳಲ್ಲಿ ನಿಮಗೆ ಹಾಗೂ ನಿಮ ಪಕ್ಷಕ್ಕೆ ದಲಿತರ ಹಿಡಿ ಶಾಪ ಕಾಡಲಿದೆ ಎಂದರು. ಹೊಟ್ಟೆಪಾಡಿಗಾಗಿ ಸಿದ್ದರಾಮಯ್ಯ ನವರು ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ನಾವು ಜನರ ಅಭಿವೃದ್ಧಿ ಮಾಡಲು ಬಂದಿದ್ದೇವೆ ಎಂದರು.

ರಾಷ್ಟ್ರ ಭಕ್ತಿ ಕಾಂಗ್ರೆಸ್, ನಿಂದ ಕಲಿಯಬೇಕಿಲ್ಲ

ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಸಂಘದ ಸ್ವಯಂಸೇವಕರು, ಪ್ರಚಾರಕರು, ರಾಷ್ಟ್ರ ಸೇವೆಯೇ ತಮ್ಮ ಮುಖ್ಯ ದ್ಯೇಯವಾಗಿಸಿಕೊಂಡು, ಕೆಲಸ ಮಾಡುತ್ತಿರುವ ವ್ಯಕ್ತಿಯನ್ನು ನೀವು ಭಯೋತ್ಪಾದಕರೆಂದು ಕರೆಯುತ್ತಿರಾ ಎಂದರೆ, ನಿಮಗೆ ನಾಚಿಕೆಯಾಗಬೇಕು ಎಂದ ಅವರು, ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರ ಭಕ್ತಿ ಯ ಗಂಧ ಗಾಳಿಯೂ ಗೊತಿಲ ಎಂದು ನುಡಿದರು.

ನಮ್ಮಲ್ಲಿ ಹಿಂದುತ್ವದ ರಕ್ತ ಇದೆ

ಒಂದು ಕಾಲದಲ್ಲಿ ವಿಸಾ ಕೊಡದ ರಾಷ್ಟ್ರಗಳು, ಇಂದು ನರೇಂದ್ರ ಮೋದಿ ವಿಶ್ವದ ನಾಯಕ ಎಂದು ಹೇಳಿಕೆ ನೀಡಿವೆ, ಇಂತಹ ಜಗ ಮೆಚ್ಚುಗೆ ಪಡೆದ ನಾಯಕನನ್ನು ತಾವು ಎಕ ವಚನದಲ್ಲಿ ಮಾತನಾಡಿ,ಕಾಂಗ್ರೆಸ್ ಪಕ್ಷ ತಮ್ಮ ಗೌರವವನ್ನೆ ತಾವೇ ಕಳೆದುಕೊಳ್ಳುತ್ತಿದ್ದಾರೆ. ನೂರು ಕೋಟಿ ವ್ಯಾಕ್ಸಿನ ಕೊಟ್ಟ ಮೊದಲ ನಾಯಕ ಮೋದಿ. ನಾನು ನಿಮಗೆ ಎಕ ವಚನದಲ್ಲಿ ಇಲ್ಲಿಯವರೆಗೆ ಮಾತನಾಡಿಲ್ಲ, ಆದರೆ ಇನ್ನೂ ಮುಂದೆ ಮಾತಾಡುವ ಸಮಯ ಬರುತ್ತದೆ ಎಂದರು.

ನಮ್ಮಲ್ಲಿ ಹಿಂದುತ್ವದ ರಕ್ತ ಹರಿದಾಡುತ್ತಿದೆ. ಹಿಂದುತ್ವದ ಎಲ್ಲ ಜಾತಿಗಳು ಅಭಿವೃದ್ಧಿ ಹೊಂದಿದರೆ, ಹಿಂದುತ್ವ ತನಿಂದ ತಾನೆ ಅಭಿವೃದ್ಧಿ ಹೊಂದುತ್ತದೆ ಎಂದರು. ಹೀಗಾಗಿ ಹಿಂದೂಳಿದ ವಗ೯ಗಳ ಸಮುದಾಯವನ್ನು ಜಾಗೃತಿ ಮಾಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದರು.

ರಾಜ್ಯದಲ್ಲಿ ಹಿಂದೂಳಿದ ವಗ೯ಗಳ 310 ಮಂಡಲಗಳಿವೆ, ಹೀಗಾಗಿ ಈ ಮಂಡಲಗಳಿಂದ ಬರುವಂತಹ ದಿನಗಳಲ್ಲಿ 3500 ಜನರುಗಳ ದೊಡ್ಡ ಹಿಂದೂಳಿದ ವಗ೯ಗಳ ಸಮಾವೇಶವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಹಿಂದೂಳಿದ ವಗ೯ಗಳ ಜನರಿಗೂ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ತಲುಪಿಸಿ, ಅವರ ಅಭಿವೃದ್ಧಿ ಮಾಡಲಾಗುವುದು. ಇದಕ್ಕೆ ನಮ್ಮ ಸರಕಾರ ಬದ್ದವಾಗಿದೆ ಎಂದರು.

ಬರುವ ಒಂದುವರೇ ವಷ೯ದಲ್ಲಿ ಹಿಂದೂಳಿದ ಜನರ ಜಾಗೃತಿ ಮೂಲಕ, ನಮ್ಮ ಶಕ್ತಿಯನ್ನು ತೋರಿಸೋಣ ಎಂದು ಶಪತ ಮಾಡಿದರು. ನಮ್ಮ ಪೂರ್ಣ ಪ್ರಮಾಣದ ಸರಕಾರ ಬರುವ ನಿಟ್ಟಿನಲ್ಲಿಯೇ ನಾವು ಕೆಲಸ ಮಾಡಿ, ನಮ್ಮ ಸಮುದಾಯಕ್ಕೆ ನ್ಯಾಯ ಸಿಗುವ ,ನಮ್ಮ ವಗ೯ವನ್ನು ಗುರುತಿಸುವ ಹಾಗೇ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಓಬಿಸಿ ಅಧ್ಯಕ್ಷ ನರೇಂದ್ರ ಬಾಬು,ಶಾಸಕ ಬಸವರಾಜ ಮತ್ತಿಮಡು, ಶಶೀಲ ನಮೋಶಿ, ನಗರ ಅಧ್ಯಕ್ಷ ಸಿದ್ದಾಜೀ ಪಾಟೀಲ್, ವಿವೇಕಾನಂದ ಉಪಾದ್ಯಾಯ,ಶೋಭಾ,ದಮ೯ಣ್ಣಾ ದೊಡ್ಡಮನಿ, ಶರಣಪ್ಪ ತಳವಾರ,ಅಂಬು ಡಿಗ್ಗಿ,ಅಮರನಾಥ ಪಾಟೀಲ್, ಮಹಾದೇವ ಬೆಳಮಗಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss