Wednesday, August 10, 2022

Latest Posts

ಬಿಜೆಪಿ ಬೂತ್ ಕಮಿಟಿಯಿಂದ ಕೊರೋನಾ ವಾರಿಯರ್ಸ್ ಗೆ ಸನ್ಮಾನ

ಹೊಸ ದಿಗಂತ ವರದಿ, ಚಿತ್ರದುರ್ಗ:

ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಸಾರ್ವಜನಿಕ ಸೇವೆ ಸಲ್ಲಿಸಿದ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರು ಹಾಗೂ ಆಯಾಗಳಿಗೆ ಶಿವಶರಣ ಹರಳಯ್ಯ ಮಹಾವೇದಿಕೆ ಹಾಗೂ ಬಿಜೆಪಿ ಬೂತ್ ಕಮಿಟಿಯಿಂದ ನಗರದ ಕೆಳಗೋಟೆ ಬೇಡರಕಣ್ಣಪ್ಪ ದೇವಸ್ಥಾನದ ಸಮೀಪವಿರುವ ಹರಳಯ್ಯ ಸಮುದಾಯ ಭವನದಲ್ಲಿ ಶುಕ್ರವಾರ ಸನ್ಮಾನಿಸಲಾಯಿತು.
ಬಿಜೆಪಿ ಯುವ ಮುಖಂಡ ಡಾ.ಸಿದ್ದಾರ್ಥ ಗುಂಡಾರ್ಪಿ ಮಾತನಾಡಿ, ಕೋವಿಡ್‌ನಂತಹ ಅಪಾಯಕಾರಿ ಸಂದರ್ಭದಲ್ಲಿ ವೈದ್ಯರು, ದಾದಿಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆಯಾಗಳು ಪ್ರಾಣವನ್ನು ಲೆಕ್ಕಿಸದೆ ಕೋವಿಡ್ ಸೋಂಕಿತರ ಸೇವೆ ಮಾಡಿದ್ದಾರೆ. ಇಂತಹವರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ನಿಜಕ್ಕೂ ಅರ್ಥಪೂರ್ಣ ಎಂದು ಹೇಳಿದರು.
ನಗರಸಭೆ ಸದಸ್ಯ ಅಂಗಡಿ ಮಂಜಣ್ಣ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಬೂತ್ ಅಧ್ಯಕ್ಷ ರಮೇಶ್, ತಾಲ್ಲೂಕು ಅಧ್ಯಕ್ಷ ಪಿ.ರಾಕೇಶ್, ಜಯಣ್ಣ ಸಾಗಲಗಟ್ಟೆ, ಮಾಯಣ್ಣ, ರಘು, ರಾಕೇಶ್ ಪಿ., ಸುಪ್ರೀಂ ಚಕ್ರವರ್ತಿ, ಜೆ.ಮಂಜುನಾಥ್, ಬಸವರಾಜ್, ಶೇಖರ್ ಪಾಳೆಗಾರ್ ಇನ್ನು ಮುಂತಾದವರು ಸಮಾರಂಭದಲ್ಲಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss