spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮೊಸಳೆಯಿಂದ ಜನರಲ್ಲಿ ಆತಂಕ ಸೃಷ್ಟಿ, ಸಮುದ್ರಕ್ಕೆ ಬಿಟ್ಟು ಬಿಡಿ: ಶಾಸಕ ಎಂ.ಎಸ್.ಸೋಮಲಿಂಗಪ್ಪ

- Advertisement -Nitte

ಹೊಸ ದಿಗಂತ ವರದಿ,ಬಳ್ಳಾರಿ:

ಸಿರುಗುಪ್ಪ ತಾಲೂಕಿನ ತುಂಗಭದ್ರಾ ನದಿ ಪಾತ್ರದಲ್ಲಿ ಮೊಸಳೆಗಳ ಹಾವಳಿ ಹೆಚ್ಚಾಗಿದ್ದು, ಇತ್ತೀಚೆಗೆ ದಡಕ್ಕೆ ಬಂದ ಬೃಹತ್ ಮೊಸಳೆಯೊಂದು ವ್ಯಕ್ತಿಯೋಬ್ಬರನ್ನು ಬಲಿ ಪಡೆದಿದೆ. ಕೂಡಲೇ ಮೊಸಳೆಯನ್ನು ಸಮುದ್ರಕ್ಕೆ ಬಿಟ್ಟು ಬಿಡಿ ಎಂದು ಸಿರಗುಪ್ಪ ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರು ಸದನದಲ್ಲಿ ಶುಕ್ರವಾರ ಗಮನಸೆಳೆದರು.
ನದಿ ಪಾತ್ರದ ಜನರು ಭಯ ಭೀತರಾಗಿದ್ದಾರೆ, ಸುಮಾರು ಜಾನುವಾರುಗಳು, ಸಾಕು ಪ್ರಾಣಿಗಳನ್ನು ಮೊಸಳೆ ಬಲಿ ಪಡೆದಿದೆ. ತಾಲೂಕಿನಲ್ಲಿ ತುಂಗಭದ್ರಾ ನದಿ ಪಾತ್ರದಲ್ಲಿ ಸುಮಾರು 30ಕ್ಕೂ ಹೆಚ್ಚು ಹಳ್ಳಿಗಳು ಬರಲಿವೆ, ಮೊಸಳೆ ಹಾವಳಿಯಿಂದ ಜನರು ಭಯ‌ ಭೀತರಾಗಿದ್ದಾರೆ. ಸುಮಾರು 8-10 ಅಡಿ ಉದ್ದದ 8ಟನ್ ಭಾರದ ಮೊಸಳೆ ನದಿ ಪಾತ್ರದಲ್ಲಿದ್ದು, ಹಾವಳಿ ಹೆಚ್ಚಾಗಿದೆ. ಈಗಾಗಲೇ ವ್ಯಕ್ತಿಯೋಬ್ಬರನ್ನು ಬಲಿ ಪಡೆದಿದೆ ಎಂದು ಸದನದ ಗಮನಸೆಳೆದರು. ಇದಕ್ಕೆ ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿ ಅವರು ಉತ್ತರಿಸಿ, ನದಿ ಇದ್ದಲ್ಲಿ ಮೊಸಳೆ ಹಾವಳಿ ಇರುವುದು ಸಾಮಾನ್ಯ, ನನ್ನ ಕ್ಷೇತ್ರದಲ್ಲಿ ಮೂರು ನದಿಗಳು ಹರಿದಿವೆ, ಜನರು ಜಾಗೃತಿ ವಹಿಸಬೇಕು, ಸಿರುಗುಪ್ಪ ತಾಲೂಕಿನ ನದಿ ಪಾತ್ರದಲ್ಲಿ ಕಾಣಿಸಿಕೊಂಡ ‌ಮೊಸಳೆ ಬಲಿ ಪಡೆದ ವ್ಯಕ್ತಿ ಕುಟುಂಬಕ್ಕೆ 7.50ಲಕ್ಷ ರೂ.ಪರಿಹಾರ ನೀಡಲಾಗುವುದು. ಮೊಸಳೆಗಳನ್ನು ಸೆರೆ ಹಿಡಿದು ಬೇರೆ ನದಿಗೆ ಬಿಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿರುವೆ ಎಂದು ಉತ್ತರಿಸಿದರು. ಅಧಿಕಾರಿಗಳು ಆಗಾಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು, ಮೊಸಳೆ ಹಾವಳಿ ಕುರಿತು ಮಾಹಿತಿ ದೊರೆತ ಕೂಡಲೇ ಅವುಗಳನ್ನು ಸೆರೆ ಹಿಡಿದು ಸ್ಥಾಳಾಂತರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕ ಸೋಮಲಿಂಗಪ್ಪ ಅವರು ಗಮನಸೆಳೆದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss