Wednesday, August 17, 2022

Latest Posts

ಡಸ್ಟರ್ ಕಾರ್ ಗೆ ಆಕಸ್ಮಿಕ ಬೆಂಕಿ: ಸಂಪೂರ್ಣ ಭಸ್ಮ

ಹೊಸ ದಿಗಂತ ವರದಿ, ಶಿವಮೊಗ್ಗ: 

ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿ ಪ್ರಾರಂಭದ  ಸೂರ್ಯಾಸ್ತಮ ವ್ಯೂ ಹತ್ತಿರ ಸಂಜೆ 5 ರ  ಸುಮಾರಿಗೆ  ಡಸ್ಟರ್ ಕಾರ್ ನಲ್ಲಿ  ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಕಾರು ಸಂಪೂರ್ಣ ಭಸ್ಮವಾಗಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರ್ಕಳದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಗುಂಬೆ ಘಾಟಿಯ ಮೊದಲ ತಿರುವಿನಲ್ಲಿ ಈ ಘಟನೆ ಸಂಭವಿಸಿದೆ.
ಶಿವಮೊಗ್ಗದ ಅರವಿಂದ್ ಎಂಬುವರು ಕಾರ್ಕಳದಲ್ಲಿ ಈ ಕಾರನ್ನು ಖರೀದಿಸಿದ್ದರು. ಇಂದು ಕಾರನ್ನು  ಶಿವಮೊಗ್ಗಕ್ಕೆ ತರುತ್ತಿದ್ದರು.ಕಾರಿನಲ್ಲಿ ಅರವಿಂದ್ ಸೇರಿದಂತೆ ಮೂವರು ಪ್ರಯಾಣಿಸುತ್ತಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಮೂವರು ಕಾರಿನಿಂದ ಇಳಿದು ಬಚಾವಾಗಿದ್ದಾರೆ.
ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಆಗುಂಬೆ ಘಾಟಿಯಲ್ಲಿ ಕೆಲ ಹೊತ್ತು ವಾಹನ ಸಂಚಾರ ಬಂದ್ ಆಗಿತ್ತು. ಆಗುಂಬೆ  ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೆಂಕಿ ನಂದಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!