spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಾಡಿನಿಂದ ನಾಡಿಗೆ ಬಂದಿರುವ ದಸರಾ ಗಜಪಡೆಗೆ ವಿಮೆ

- Advertisement -Nitte

ಹೊಸ ದಿಗಂತ ವರದಿ, ಮೈಸೂರು:

ಮಹಾಮಾರಿ ಕೊರೋನಾ 3ನೇ ಅಲೆ ಭೀತಿಯ ಹಿನ್ನಲೆಯಲ್ಲಿ ಈ ಬಾರಿಯೂ ಸರಳ ಹಾಗೂ ಸಾಂಪ್ರದಾಯಿಕವಾಗಿ ನಡೆಯುವ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆಂದು ಕಾಡಿನಿಂದ ನಾಡಿಗೆ ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಹಾಗೂ ಅದರ ಮಾವುತರಿಗೆ ವಿಮಾ ಮಾಡಿಸಲಾಗಿದೆ.
ಅರಣ್ಯ ಇಲಾಖೆ ಥರ್ಡ್ ಪಾರ್ಟಿಯಿಂದ ವಿಮೆ ಮಾಡಿಸಿದೆ. ಜಂಬೂ ಸವಾರಿಯ ರೂವಾರಿ ಅಭಿಮನ್ಯು ಸೇರಿ ಗಂಡು ಆನೆಗಳಿಗೆ ತಲಾ 3.5 ಲಕ್ಷ ರೂ, ಹೆಣ್ಣಾನೆಗಳಿಗೆ 2.5 ಲಕ್ಷ ರೂ. ವಿಮೆ, ಹಾಗೂ ಒಟ್ಟು 16 ಮಂದಿ ಮಾವುತರು, ಕಾವಾಡಿಗಳಿಗೆ ತಲಾ 1 ಲಕ್ಷ ರೂ., ಸಾರ್ವಜನಿಕ ಆಸ್ತಿಗೆ ನಷ್ಟವಾದರೆ 30 ಲಕ್ಷ ರೂ. ವಿಮೆಯನ್ನು ಮಾಡಿಸಲಾಗಿದ್ದು, ಎಲ್ಲಾ ವಿಮೆ ಅಕ್ಟೋಬರ್ 24ರವರೆಗೂ ಚಾಲ್ತಿಯಲ್ಲಿರಲಿದೆ ಎಂದು ಎಂದು ಅರಣ್ಯ ಇಲಾಖೆಯ ಡಿಸಿಎಫ್ ಡಾ. ವಿ.ಕರಿಕಾಳನ್ ತಿಳಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss