Thursday, July 7, 2022

Latest Posts

ಕನ್ನಡ ಜಾಗೃತ ವೇದಿಕೆಯಿಂದ ಕನ್ನಡ ಜಾಗೃತಿ ಅಭಿಯಾನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………

ಹೊಸ ದಿಗಂತ ವರದಿ, ಚಿತ್ರದುರ್ಗ:

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಆಡಳಿತ ಭಾಷೆಯಾಗಬೇಕೆಂದು ಕನ್ನಡ ಜಾಗೃತ ವೇದಿಕೆ ವತಿಯಿಂದ ಸಾರಿಗೆ ವಲಯದಲ್ಲಿ ಕನ್ನಡ ಜಾಗೃತಿ ಅಭಿಯಾನಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಚಿತ್ರದುರ್ಗ ಡಿಪೋ ಮ್ಯಾನೇಜರ್ ಹೊನ್ನಪ್ಪ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ಸರ್ಕಾರ ನವೆಂಬರ್ 1, 2020 ರಿಂದ ಅಕ್ಟೋಬರ್ 31, 2021 ರವರೆಗೆ ಕನ್ನಡ ಕಾಯಕ ವರ್ಷ ಎಂದು ಕರೆದಿದ್ದು, ಅದರ ಅನುಷ್ಟಾನದ ಹೊಣೆಯನ್ನು ಕನ್ನಡ ಅಭಿವೃದ್ದಿ ಪ್ರಾಧಿಕಾರ ವಹಿಸಿಕೊಂಡಿರುವ ಕಾರಣಕ್ಕಾಗಿ ಇದರಡಿ ಬರುವ ಕನ್ನಡ ಜಾಗೃತ ವೇದಿಕೆ ಸದಸ್ಯೆ ದಯಾ ಪುತ್ತೂರ್ಕರ್ ನೇತೃತ್ವದಲ್ಲಿ ಡಿಪೋ ಮ್ಯಾನೇಜರ್‌ಗೆ ಮನವಿ ನೀಡಿ ಸಾರಿಗೆ ವಲಯದಲ್ಲಿ ಕನ್ನಡ ಜಾಗೃತಿ ಅಭಿಯಾನಕ್ಕಾಗಿ ಒತ್ತಾಯಿಸಲಾಯಿತು.
ಕರ್ನಾಟಕ ರಾಜ್ಯ ಸಾರಿಗೆ ವಲಯದ ಮುಖೇನ ಹೊರ ರಾಜ್ಯದ ಜನತೆಯ ವಲಸೆ ಜಾಸ್ತಿಯಾಗುತ್ತಿರುವುದರಿಂದ ಕನ್ನಡ ಭಾಷೆಗೆ ಕುಂದು ಬರಬಾರದೆನ್ನುವುದು ಈ ಅಭಿಯಾನದ ಉದ್ದೇಶ. ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿದ ಹಿಂದುಳಿದ ವರ್ಗಗಳ ಹರಿಕಾರ, ಉಳುವವನಿಗೆ ಭೂಮಿ ಕೊಡಿಸಿದ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸುರವರ ಜನ್ಮದಿನದ ಪ್ರಯುಕ್ತ ಸಾರಿಗೆ ವಲಯದಲ್ಲಿ ಕನ್ನಡ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಜಾಗೃತ ವೇದಿಕೆ ಸದಸ್ಯೆ ದಯಾ ಪುತ್ತೂರ್ಕರ್ ತಿಳಿಸಿದರು.
ಶಿವರುದ್ರಪ್ಪ ಪಂಡರಹಳ್ಳಿ, ನಾಗರಾಜ್ ಹೊರ್ತಿ, ವಿನಾಯಕ ಆರ್.ಜೆ, ಜಯದೇವಮೂರ್ತಿ, ನಿರ್ಮಲ ಭಾರಧ್ವಾಜ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss