Tuesday, June 28, 2022

Latest Posts

ಅತೀವೃಷ್ಠಿಯಿಂದ ಬಿದ್ದ ಮನೆಗಳ ಆಯ್ಕೆಪ್ರಕ್ರಿಯೆಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗಳ ತಾರತಮ್ಯ: ಸದಸ್ಯರಿಂದ ಪ್ರತಿಭಟನೆ

ಹೊಸ ದಿಗಂತ ವರದಿ, ಬ್ಯಾಡಗಿ:

ತಾಲೂಕಿನ ತಡಸ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅತೀವೃಷ್ಠಿಯಿಂದ ಬಿದ್ದ ಮನೆಗಳ ಆಯ್ಕೆಪ್ರಕ್ರಿಯೆಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗಳು ತಾರತಮ್ಯನೀತಿಯನ್ನು ಅನುರಿಸಿ ನೈಜ್ಯ ಫಲಾನುಭವಿಗಳಿಗೆ ಅನ್ಯಾಯವೇಸಗಿದ್ದಾರೆ ಎಂದು ಗ್ರಾಮ ಪಂಚಾಯತಿ ಸದಸ್ಯರು ಮಂಗಳವಾರ ತಹಶೀಲ್ದಾರ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ದೀಲಿಪಕುಮಾರ ಮೆಗಳಮನಿ ಮಾತನಾಡಿ, ಅರ್ಹರಿಗೆ ನ್ಯಾಯ ದೊರೆಯುವವರೆಗೆ ಹೋರಾಟ ಮಾಡಲಾಗುವುದು ಡಿ.9ರೊಳಗಾಗಿ ಆಯ್ಕೆ ಪಟ್ಟಿಯನ್ನು ಪ್ರಕಟಿಸದೇ ಇದ್ದರೆ ವಿಧಾನ ಪರಿಷತ್ ಚುನಾವಣೆಯನ್ನು ಬಹಿಷ್ಕರಿಸಲಾಗುವುದೆಂದು ಎಂದು ಎಚ್ಚರಿಸಿದರು.
ಕಳೆದ 20 ದಿನಗಳ ಹಿಂದೆ ಅತಿವೃಷ್ಠಿಯಿಂದ ತಡಸ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ 60 ಕ್ಕೂ ಹೆಚ್ಚು ಮನೆಗಳು ಬಿದ್ದಿವೆ. ಈ ಪೈಕಿ 47 ಮನೆಯ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದಾರೆ. ಆದರೆ ಇವರಲ್ಲಿ ಕೆವಲ 11 ಫಲಾನುಭವಿಗಳು ಆಯ್ಕೆಯಾಗಿದ್ದು ಎಂದರು.
ಡಾಟಾ ಏಂಟ್ರಿಯ ಸಂದರ್ಭದಲ್ಲಿ 5 ಜನರನ್ನು ಮಾತ್ರ ತೊರಿಸಲಾಗಿದೆ. ಕಂದಾಯ ಇಲಾಖೆಯ ಸಿಬ್ಬಂದಿಯೊಬ್ಬ ಮಾಡಿದ ಅವಘಡದಿಂದ ನೂರಾರು ಜನ ಮನೆಯ ಆಯ್ಕೆಯಿಂದ ದೂರ ಉಳಿಯುವಂತಾಗಿದೆ. ಅಲ್ಲದೇ ಮನೆ ಹೆಸರು ಸೇರಿಸಲು ಸಿಬ್ಬಂದಿ ಹಾಗೂ ಏಜೆಂಟರ ಹಾವಳಿ ತಹಶೀಲ್ದಾರ ಕಛೆರಿಯಲ್ಲಿ ಹೆಚ್ಚಾಗಿದ್ದು, ಇಂತಹ ಸಿಬ್ಬಂದಿಗಳನ್ನು ಸ್ಥಳೀಯ ಶಾಸಕರು ತನಿಖೆ ನಡೆಸಿ ಕೂಡಲೇ ಅಮಾನಂತುಗೊಳಿಸಿ ತಾಲೂಕಿನ ಜನತೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ಕೂಡಲೇ ಅರ್ಹ ಫಲನುಭವಿಗಳಿಗೆ ನ್ಯಾಯ ದೊರೆಯದೇ ಇದ್ದರೆ ಡಿ.10 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಬರಮಪ್ಪ ಹುಲ್ಲತ್ತಿ, ಹೊನ್ನಪ್ಪ ಸಣ್ಣಬಾರ್ಕಿ, ಕರಬಸಪ್ಪ ಶಿರಗಂಬಿ, ನಾರಾಯಣಪ್ಪ ದಾಸರ, ಮಲ್ಲಿಕಾರ್ಜುನಪ್ಪ ಕಾರ್ಗಿ, ಮಿನಾಕ್ಷವ್ವ ತಳವಾರ, ರೇಖಾ ಹಂಸಬಾವಿ, ರೇಣಕವ್ವ ಬಣಕಾರ, ಹನುಮಂತಪ್ಪ ಇಮ್ಮಡಿ, ಸಂತೋಷ ಗಿಡ್ಡಣ್ಣನವರ, ಹನುಮಂತಪ್ಪ ಶಿರಗಂಬಿ ಸೇರಿದಂತೆ ಇನ್ನಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss