ಹೈಸ್ಕೂಲಿಗೆ ಬಂದಾಗ ಮಗಳಿಗೆ ಬ್ರಾ ತಂದುಕೊಡೋದು ಸಾಮಾನ್ಯ, ಆಕೆ ದೇಹರಚನೆಯ ಅನುಗುಣವಾಗಿ ಬ್ರಾ ಹಾಕಿಸುವ ಸಮಯ ಬರುತ್ತದೆ. ಬರೀ ಸ್ಪೋರ್ಟ್ಸ್ ಬ್ರಾ ಹಾಕುತ್ತಿದ್ದ ಮಗಳಿಗೆ ರಿಯಲ್ ಬ್ರಾ ಇಷ್ಟವಾಗದೇ ಇರಬಹುದು. ಆದರೆ ಯಾಕೆ ಹಾಕಬೇಕು, ಯಾವ ಸೈಝ್ ಹಾಕಬೇಕು, ಹಾಕಿ ಕಾನ್ಫಿಡೆಂಟ್ ಆಗಿ ಹೇಗಿರಬೇಕು ಎನ್ನುವ ಬಗ್ಗೆ ಹೇಳಿಕೊಡಿ..
ಆ ವಯಸ್ಸಿನ ಮಕ್ಕಳು ಎರಡು ಮೂರು ಸ್ಲಿಪ್ ಧರಿಸಿಯೋ ಇಲ್ಲವೋ ಕುತ್ತಿಗೆ ಬಗ್ಗಿಸಿಕೊಂಡು ನಡೆಯುವ ಅಭ್ಯಾಸ ಮಾಡಿಬಿಡುತ್ತಾರೆ. ಆದರೆ ಇದು ಮುಂದೆ ತೊಂದರೆಯಾಗುತ್ತದೆ. ಅವರ ಕಾನ್ಫಿಡೆನ್ಸ್ ಹಾಳು ಮಾಡುತ್ತದೆ.
ಮೊದಲು ಮಗಳಿಗೆ ಬ್ರಾ ಯಾಕೆ ಹಾಕಬೇಕು, ಸರಿಯಾದ ಬ್ರಾ ಹಾಕದಿದ್ದರೆ ಏನೆಲ್ಲಾ ಆಗುತ್ತದೆ ಎನ್ನುವುದನ್ನು ಎಕ್ಸ್‌ಪ್ಲೇನ್ ಮಾಡಿ. ಸಾಮಾನ್ಯವಾಗಿ 12-14ವರ್ಷದ ಮಕ್ಕಳಿಗೆ ಬ್ರಾ ಅವಶ್ಯಕತೆ ಇದೆ. ಆದರೆ ಈಗಿನ ಮಕ್ಕಳು 10ವರ್ಷಕ್ಕೆ ಪಿರಿಯಡ್ಸ್ ಆರಂಭವಾಗುತ್ತದೆ. ಹಾಗಾಗಿ ಮಕ್ಕಳ ಅವಶ್ಯಕತೆ ಮೇಲೆ ಇನ್ನರ್‌ವೇರ್ ಖರೀದಿಸಿ.
ಬ್ರೆಸ್ಟ್ ಹೆಲ್ತ್, ಪಿರಿಯಡ್ಸ್, ಸಪೋರ್ಟ್ ಬಗ್ಗೆ ಮುಕ್ತವಾಗಿ ಮಾತನಾಡಿ ಚರ್ಚೆ ಮಾಡಿ, ಇದರಿಂದ ಇದು ನಾರ್ಮಲ್ ಎನಿಸುತ್ತದೆ. ತಾನಾಗೇ ಕಾನ್ಫಿಡೆನ್ಸ್ ಬರುತ್ತದೆ.