ಇದೆಂಥಾ ಸೋಜಿಗ | ಕಣ್ಣೆದುರೇ ಹಿಮದ ಮುದ್ದೆಯಾಯಿತು ಹಿಮಾಚಲ ಪ್ರದೇಶದ ಜಲಪಾತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉತ್ತರ ಭಾರತದಲ್ಲಿ ಅತಿ ಕಡಿಮೆ ತಾಪಮಾನ ದಾಖಲಾಗಿದೆ. ಹೊರಗೆ ಹೋದರೆ ಸಾಕು ಹೆಪ್ಪುಗಟ್ಟುವಷ್ಟು ಚಳಿ. ಹಗಲು-ರಾತ್ರಿಯೆನ್ನದೆ ಕೆಲ ಪ್ರದೇಶಗಳು ಮಂಜಿನಿಂದ ಆವೃತವಾಗಿವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಕನಿಷ್ಠ ತಾಪಮಾನ 3.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮತ್ತೊಂದೆಡೆ ಹಿಮಾಲಯಕ್ಕೆ ಸಮೀಪದಲ್ಲಿರುವ ಹಿಮಾಚಲ ಪ್ರದೇಶದಲ್ಲಿ ತಾಪಮಾನ ಮೈನಸ್ ಡಿಗ್ರಿಗೆ ಕುಸಿದಿದ್ದು, ನೀರು ಕೂಡ ಹೆಪ್ಪುಗಟ್ಟಿದೆ. ಹಿಮಾಚಲದ ಕುಲುವಿನಲ್ಲಿರುವ ಜಲಪಾತವೊಂದು ಹೆಪ್ಪುಗಟ್ಟಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.

ಜಪದಲ್ಲಿ ಹೆಪ್ಪುಗಟ್ಟಿದ ಸೌಂದರ್ಯವನ್ನು ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಜಲಪಾತ ಕೆತ್ತಿದ ಶಿಲ್ಪದಂತೆ ಹೆಪ್ಪುಗಟ್ಟಿದ್ದು, ಹೆಪ್ಪುಗಟ್ಟಿದ ಜಲಪಾತದಲ್ಲಿ ಸ್ಥಳೀಯ ಜನರು ಸೆಲ್ಫಿ ತೆಗೆದು ಸದ್ದು ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!