ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಗರ್ಭಿಣಿಯರು ಯಾವ ಹಣ್ಣುಗಳನ್ನು ಸೇವಿಸಬೇಕು? ಯಾವುದನ್ನು ಸೇವಿಸಬಾರದು? ತಿಳಿಯಲೇಬೇಕಾದ ವಿಚಾರ

ತಾಯಿಯಾಗುವ ಕನಸನ್ನು ಪ್ರತಿ ಹೆಣ್ಣು ಕೂಡ ಇಚ್ಛಿಸುತ್ತಾಳೆ. ಈ ಅನುಭವವನ್ನು ಆಕೆ ಕ್ಷಣ ಕ್ಷಣ ಆನಂದಿಸುತ್ತಾಳೆ. ಗರ್ಭಾವಸ್ಥೆಯಲ್ಲಿರುವವರು ತಮ್ಮ ದೇಹದ ಬಗ್ಗೆ ಹೆಚ್ಚು ಗಮನವಹಿಸಬೇಕು. ಅವರು ಸೇವಿಸುವ ಆಹಾರ ಮಗುವಿಗೆ ಹೋಗುವುದರಿಂದ ಆದಷ್ಟು ಜಾಗೃತರಾಗಿರಬೇಕು.. ಹಾಗಿದ್ದರೆ ಗರ್ಭಿಣಿಯರು ಯಾವ ಹಣ್ಣುಗಳನ್ನು ಸೇವಿಸಬಾರದು? ಯಾವ ಹಣ್ಣುಗಳನ್ನು ಸೇವಿಸಬೇಕು ನೋಡಿ

ಸೇವಿಸಬಾರದ ಹಣ್ಣುಗಳು:

ಪಪಾಯಿ: ಪಪಾಯದಲ್ಲಿರುವ ಲ್ಯಾಟೆಕ್ಸ್ ಅಂಶವಿದ್ದು, ಇದು ಮಗುವಿನ ಪ್ರಾಣಕ್ಕೆ ಅಪಾಯಕಾರಿಯಾಗಿದೆ. ಮಾಗಿದ ಪಪ್ಪಾಯಿಯಲ್ಲಿ ಕಬ್ಬಿಣ, ಜೀವಸತ್ವದ ಅಂಶವಿದ್ದು, ಇದು ಆರೋಗ್ಯ ಒಳ್ಳೆಯದು.

ಅನಾನಸ್:
ಇದರ ಸೇವನೆಯಿಂದ ಗರ್ಭಪಾತವಾಗುವ ಸಾಧ್ಯತೆ ಇರುವುದರಿಂದ ಇದನ್ನು ಗರ್ಭಿಣಿಯರ ಆಹಾರವಾಗಿ ನೀಡುವುದಿಲ್ಲ.

ದ್ರಾಕ್ಷಿ: ಗರ್ಭಿಣಿಯರ ಕೊನೆಯ ಮೂರು ತಿಂಗಳ ಅವಧಿಯಲ್ಲಿ ದ್ರಾಕ್ಷಿ ಸೇವಿಸೋದು ಮಗುವಿಗೂ ಹಾಗೂ ತಾಯಿಯ ಆರೋಗ್ಯಕ್ಕೂ ಒಳ್ಳೆಯದಲ್ಲ.

ಸೇವಿಸಬಹುದಾದ ಹಣ್ಣುಗಳು:

ಕಲ್ಲಂಗಡಿ: ಇದರಲ್ಲಿ ಹೆಚ್ಚು ನೀರಿನಾಂಶ ಇದ್ದು, ಇದು ದೇಹದಲ್ಲಿ ಎಲೆಕ್ಟ್ರೋಲೈಟ್ ಅನ್ನು ಸಮತೋಲನಕ್ಕೆ ತರಿಸುತ್ತದೆ.

ಬಾಳೆಹಣ್ಣು: ಇದರಲ್ಲಿ ಹೆಚ್ಚು ಕಾರ್ಬೋಹೈಡ್ರೇಟ್ ಅಂಶವಿದೆ. ಇದರಿಂದ ಅನೇಮಿಯಾದಂತಹ ಕಾಯಿಲೆಗಳಿಂದ ಪಾರಾಗಬಹುದು.

ಕಿತ್ತಳೆ: ಇದರಲ್ಲಿನ ವಿಟಮಿನ್ ಸಿ ಅಂಶವು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ,

ಅವಕಾಡೋ: ಇದರಲ್ಲಿನ ವಿಟಮಿನ್ ಕೆ, ಬಿ, ಫೈಬರ್ ಅಂಶಗಳು ಇದೆ. ಅವಕಾಡೋ ಸೇವನೆಯಿಂದ ಮಗುವಿನ ಆರೋಗ್ಯ ವೃದ್ಧಿಯಾಗುತ್ತದೆ.

ಇದನ್ನು ಹೊರತಾಗಿ ಬೇರೆ ಹಣ್ಣುಗಳನ್ನೂ ಗರ್ಭಿಣಿಯರು ಸೇವಿಸಬಹುದು. ಇದರಿಂದ ಮಗುವಿನ ಬೆಳವಣಿಗೆ ಉತ್ತಮವಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss