Video ಸುದ್ದಿಕತೆ: ನೀರಿನಿಂದ ಇಂಧನ, ಇಲ್ಲಿದೆಯೇ ಮೋದಿ-ಅಂಬಾನಿ ಗೆಳೆತನ?

0
280

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜಗತ್ತು ಪಳೆಯುಳಿಕೆ ಇಂಧನಗಳಿಂದ ಮುಕ್ತಿ ಬಯಸುತ್ತಿರುವ ಸಂದರ್ಭದಲ್ಲಿ ಭಾರತಕ್ಕೂ ಇದು ಪ್ರಮುಖ ಗುರಿಯೇ. ಏಕೆಂದರೆ ತೈಲ ಆಮದಿಗಾಗಿಯೇ ಭಾರತದ ಬಹುದೊಡ್ಡ ಮೊತ್ತ ವ್ಯಯವಾಗಿಹೋಗುತ್ತಿದೆ.
ನವೀಕೃತ ಇಂಧನ ಮೂಲಗಳನ್ನು ಆಧರಿಸಿದ ವಾಹನಗಳು ಇತ್ಯಾದಿಗಳು ಮುನ್ನೆಲೆಗೆ ಬರುತ್ತಿವೆಯಾದರೂ ಅಲ್ಲಿಯೂ ಬ್ಯಾಟರಿಗಾಗಿ ಇತತರರ ಮೇಲೆ ಅವಲಂಬಿಸಬೇಕಾದ ಸ್ಥಿತಿ ಇದೆ.
ಹೀಗಿರುವಾಗ ಭಾರತ ಯೋಚಿಸುತ್ತಿರುವುರು ಜಲಜನಕದ ಇಂಧನ ಕೋಶಗಳ ಮೂಲಕ ವಾಹನ ಚಲಾಯಿಸುವ ತಂತ್ರಜ್ಞಾನದ ಬಗ್ಗೆ. ಜಲಜನಕ ಉತ್ಪಾದಿಸುವ ಹಸಿರು ತಂತ್ರಜ್ಞಾನ ಇನ್ನೂ ಪ್ರಗತಿ ಹಂತದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಘೋಷಿಸಿದ್ದಾರೆ.
ಈ ನಿಟ್ಟಿನಲ್ಲಿ ಹಲವು ಖಾಸಗಿ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ. ಆ ಪೈಕಿ, ಮುಕೇಶ್ ಅಂಬಾನಿ ನೇತೃತ್ವದ ರಿಲಾಯನ್ಸ್, ಜಾಮ್ ನಗರದಲ್ಲಿ ಸಂಶೋಧನಾ ಘಟಕವನ್ನೇ ಸ್ಥಾಪಿಸಿ ಮುಂಚೂಣಿಯಲ್ಲಿದೆ.
ಈ ಎಲ್ಲ ಪ್ರಯತ್ನಗಳ ಅಂತರಾಳ ಬಿಚ್ಚಿಡುತ್ತಿದೆ ಈ ವಿಡಿಯೋ ಸುದ್ದಿಕತೆ.

LEAVE A REPLY

Please enter your comment!
Please enter your name here