Sunday, June 26, 2022

Latest Posts

ಮಲ್ಯ, ನೀರವ್, ಚೋಕ್ಸಿ ಎಲ್ಲರ ನಿದ್ದೆಯನ್ನೂ ಕಸಿದಿದೆ ಭಾರತದ ವಸೂಲಿ ಪ್ರಕ್ರಿಯೆ!

ಪ್ರೀತಿಯ ಓದುಗರೇ,

ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ನೀವು ಓಡಬಹುದು, ಆದರೆ ತಪ್ಪಿಸಿಕೊಳ್ಳಲಾರಿರಿ- ಇದು ಹಣ ಬಾಕಿ ಉಳಿಸಿಕೊಂಡು ಪರಾರಿಯಾಗುವ ಪ್ರಭಾವಿಗಳಿಗೆ ಭಾರತ ರವಾನಿಸಿರುವ ಸಂದೇಶ.

ವಿಜಯ ಮಲ್ಯ ಅವರನ್ನು ಇಂಗ್ಲೆಂಡ್ ನ್ಯಾಯಾಲಯ ದಿವಾಳಿ ಎಂದು ಘೋಷಿಸುವ ಮೂಲಕ ಅವರ ವಿದೇಶಿ ಆಸ್ತಿಗಳ ಮುಟ್ಟುಗೋಲಿಗೆ ಹಾದಿ ಸುಗಮವಾಗಿದೆ. ಹೀಗೆ ನ್ಯಾಯಾಲಯದಿಂದ ಆದೇಶ ಪಡೆಯುವುದಕ್ಕೆ ಭಾರತದ ಕಾನೂನು ಹೋರಾಟವೂ ಉತ್ಕೃಷ್ಟ ಮಟ್ಟದಲ್ಲೇ ಇದ್ದಿರಬೇಕು ಎಂಬುದು ನಿರ್ವಿವಾದ. 

ಗಮನಿಸಬೇಕಾದ ಸಂಗತಿ ಎಂದರೆ, ದೇಶವನ್ನು ತಲ್ಲಣಿಸಿದ ಎರಡು ಪ್ರಕರಣಗಳಾದ ವಿಜಯ್ ಮಲ್ಯ ಮತ್ತು ನೀರವ್ ಮೋದಿ ಪ್ರಕರಣಗಳಲ್ಲಿ ಹೀಗಾ ತಲೆಮರೆಸಿಕೊಂಡವರ ಆಸ್ತಿಗಳನ್ನು ವಶಪಡಿಸಿಕೊಳ್ಳುವುದರಲ್ಲಿ ಹಾಗೂ ಅವುಗಳನ್ನು ಮಾರಿ ಬ್ಯಾಂಕುಗಳಿಗೆ ಹಣ ತುಂಬಿಸಿಕೊಳ್ಳುವಲ್ಲಿ ಭಾರತ ಅದಾಗಲೇ ಗಣನೀಯ ಪ್ರಗತಿ ಸಾಧಿಸಿದೆ. 

ಜೂನ್ 2021ರ ಮಾಧ್ಯಮ ವರದಿ ಪ್ರಕಾರ ಮಲ್ಯ-ನೀರವ್-ಚೋಕ್ಸಿ ಪ್ರಕರಣಗಳಲ್ಲಿ ಒಟ್ಟಾಗಿ ಈವರೆಗೆ 18,170 ಕೋಟಿ ರುಪಾಯಿಗಳನ್ನು ಲಗತ್ತಿಸಿದ್ದು ಇದು 80 ಶೇಕಡ ನಷ್ಟ ತುಂಬಿದಂತೆ. ಆದರೆ ಕೇವಲ ಆಸ್ಚಿಯನ್ನು ಅಟ್ಯಾಚ್ ಮಾಡುವುದಷ್ಟೇ ತಾರ್ಕಿಕ ಅಂತ್ಯವಲ್ಲ. ಜಾರಿ ನಿರ್ದೇಶನಾಲಯವು ಜುಲೈ 16ರಂದು ಮಾಡಿರುವ ಟ್ವೀಟ್ ಪ್ರಕಾರ ಅದಾಗಲೇ 13,000 ಕೋಟಿ ರುಪಾಯಿಗಳ ಮೊತ್ತವನ್ನು ಮಲ್ಯ-ನೀರವ್-ಚೋಕ್ಸಿ ಪ್ರಕರಣಗಳಲ್ಲಿ ಸಂಬಂಧಿತ ಬ್ಯಾಂಕುಗಳಿಗೆ ಹಸ್ತಾಂತರಿಸಲಾಗಿದೆ.

ಅಂದರೆ ಕೇವಲ ಆಸ್ತಿಗಳನ್ನು ವಶಪಡಿಸಿಕೊಳ್ಳುವುದಷ್ಟೇ ಅಲ್ಲ, ಮುಂದಿನ ಕಾನೂನು ಪ್ರಕ್ರಿಯೆಯನ್ನೂ ತ್ವರಿತವಾಗಿ ಅನುಸರಿಸಿ ಬ್ಯಾಂಕುಗಳಿಗೆ ಹಣ ಸಿಗುವಂತೆ ಮಾಡುವಲ್ಲಿ ಸಹ ಒಟ್ಟಾರೆ ಆಡಳಿತ ವ್ಯವಸ್ಥೆ ಯಶ ಕಂಡಿದೆ. 

“ಬ್ಯಾಂಕುಗಳಿಗೆ ಬಾಕಿಯಿದ್ದ ನನ್ನ 6 ಸಾವಿರ ಕೋಟಿ ರುಪಾಯಿ ಸಾಲಕ್ಕೆ ಪ್ರತಿಯಾಗಿ ಜಾರಿ ನಿರ್ದೇಶನಾಲಯ ನನ್ನ 14 ಸಾವಿರ ಕೋಟಿ ರುಪಾಯಿಗಳನ್ನು ಅಟ್ಯಾಚ್ ಮಾಡಿದೆ” ಎಂದು ವಿಜಯ್ ಮಲ್ಯ ಟ್ವೀಟ್ ಮಾಡಿ ಅಲವತ್ತುಕೊಂಡಿರುವುದರಲ್ಲೇ ಭಾರತದ ಏಜೆನ್ಸಿಗಳು ಎಷ್ಟು ತ್ವರಿತವಾಗಿ ಕೆಲಸ ಮಾಡಿವೆ ಎಂಬುದು ಸ್ಪಷ್ಟವಾಗುತ್ತದೆ. 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss